ಬಸ್ರೂರು ತುಳುವೇಶ್ವರ ಕ್ಷೇತ್ರದಲ್ಲಿ ಧಾರ್ಮಿಕ ವೈಭವ

0
27

ಗಣಹೋಮ, ದ್ವಾದಶ ಜ್ಯೋತಿರ್ಲಿಂಗ ತೀರ್ಥಾಭಿಷೇಕ; ಅಷ್ಟಮಂಗಲ ಪ್ರಶ್ನೆಗೆ ಸಿದ್ಧತೆ


-ಮಂದಾರ ರಾಜೇಶ್ ಭಟ್
ಬಸ್ರೂರು: ಇತಿಹಾಸ ಪ್ರಸಿದ್ಧ ಬಸ್ರೂರು ತುಳುವೇಶ್ವರ ದೇವಸ್ಥಾನದಲ್ಲಿ ಸಂಕಲ್ಪ ಸಹಿತ ಗಣಹೋಮ ಹಾಗೂ ಇತ್ತೀಚೆಗೆ ಭಕ್ತಾದಿಗಳು ಯಾತ್ರೆ ಮಾಡಿ ಸಂಗ್ರಹಿಸಿದ ದ್ವಾದಶ ಜ್ಯೋತಿರ್ಲಿಂಗಗಳ ತೀರ್ಥಾಭಿಷೇಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ತಂತ್ರಿಗಳು, ತುಳು ಫೌಂಡೇಶನ್ ಹಾಗೂ ತುಳುವ ಮಹಾಸಭೆಯ ಪ್ರಮುಖರು, ದೇವಸ್ಥಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮ ಪಂಚಾಯತ್‌ ಪ್ರಮುಖರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಅಷ್ಟಮಂಗಲ ಪ್ರಶ್ನೆಗೆ ಸಿದ್ಧತೆ

ಗಣಹೋಮ ಹಾಗೂ ತೀರ್ಥಾಭಿಷೇಕದ ಬಳಿಕ ಸಮೀಪದ ತುಳುವೇಶ್ವರಿ ಸಾನಿಧ್ಯದಲ್ಲಿ ಅಷ್ಟಮಂಗಲ ಪ್ರಶ್ನೆ ಮುಂದುವರಿಯಲಿದೆ. ಈಗಾಗಲೇ ಜ್ಯೋತಿಷಿಗಳು ದೇವಸ್ಥಾನಕ್ಕೆ ಆಗಮಿಸಿದ್ದು, ಅಷ್ಟಮಂಗಲ ಪ್ರಶ್ನೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

ಅಷ್ಟಮಂಗಲ ಪ್ರಶ್ನೆಯು ಎರಡು ದಿನಗಳ ಕಾಲ ನಡೆಯುವ ನಿರೀಕ್ಷೆಯಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶಿಸ್ತು ಹಾಗೂ ವ್ಯವಸ್ಥೆಗೆ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.