ವಿಜಯ ಕೊಡವೂರು ಅವರ ಮನವಿಗೆ ಸ್ಪಂದನೆ : ಕೊಡವೂರು ಸರ್ಕಾರಿ ಶಾಲೆಗೆ ಲಯನ್ಸ್ ಕ್ಲಬ್ ಪರ್ಕಳ ವತಿಯಿಂದ ಸ್ಮಾರ್ಟ್ ಟಿವಿ ಕೊಡುಗೆ

0
27

ಉಡುಪಿ : ಕೊಡವೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಲಯನ್ಸ್ ಕ್ಲಬ್ ಪರ್ಕಳ ವತಿಯಿಂದ ಶಾಲೆಗೆ ಸ್ಮಾರ್ಟ್ ಟಿವಿಯನ್ನು ಹಸ್ತಾಂತರಿಸಲಾಯಿತು.

ಕೆ. ವಿಜಯ ಕೊಡವೂರು ಅವರ ಮನವಿಯ ಮೇರೆಗೆ ಲಯನ್ಸ್ ಕ್ಲಬ್ ಪರ್ಕಳ ಈ ಕೊಡುಗೆಯನ್ನು ನೀಡಿದ್ದು, ದಿನಾಂಕ 29-10-2026 ರಂದು ಶಾಲೆಯಲ್ಲಿ ಟಿವಿಯನ್ನು ಹಸ್ತಾಂತರಿಸಲಾಯಿತು.

ಸ್ಮಾರ್ಟ್ ಟಿವಿಯ ಬಳಕೆಯಿಂದ ವಿದ್ಯಾರ್ಥಿಗಳಿಗೆ ಪಠ್ಯವಿಷಯಗಳನ್ನು ದೃಶ್ಯಮಾಧ್ಯಮದ ಮೂಲಕ ಸುಲಭವಾಗಿ ಅರ್ಥಮಾಡಿಕೊಳ್ಳಲು ಹಾಗೂ ತಂತ್ರಜ್ಞಾನ ಆಧಾರಿತ ಕಲಿಕೆಗೆ ಅನುಕೂಲವಾಗಲಿದೆ. ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದ ಲಯನ್ಸ್ ಕ್ಲಬ್ ಪರ್ಕಳದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.