ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಬಸವ ಜಯಂತಿ ಪ್ರಯುಕ್ತ “ಅಂಚೆ ಕುಂಚ” ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದು ಅದರ ಫಲಿತಾಂಶ ಪ್ರಕಟವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರು, ಚಿತ್ರ ಕಲಾವಿದರು, ತೀರ್ಪುಗಾರರಲ್ಲಿ ಒಬ್ಬರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನಗಳು ಬಳ್ಳಾರಿ ಜಿಲ್ಲೆಯ ಕುರುಗೋಡಿನ ಬುಗಡೆ ನಾಗರಾಜ್, ಉತ್ತರ ಕನ್ನಡ ಜಿಲ್ಲೆಯ ಹುಳೆಗಾರ ಗ್ರಾಮದ ಸತೀಶ್‌ನಾಯ್ಕ ಗೇರುಸೊಪ್ಪಾ, ದ್ವಿತೀಯ ಬಹುಮಾನಗಳು ಹಾವೇರಿಯ ಕಾವ್ಯಪ್ರಸಾದ್, ವಿಜಯಪುರದ ಕುಮಾರ ಮಂಜುನಾಥ, ತೃತೀಯ ಬಹುಮಾನಗಳು ದಾವಣಗೆರೆ ಜಿಲ್ಲೆ ಕಾಡಜ್ಜಿಯ ಹರೀಶ್ ವಿ., ಮುಂಡರಗಿಯ ಪೂರ್ಣಿಮಾ ಮಾಗಪ್ಪನವರ, ಸಮಾದಾನಕ ಬಹುಮಾನಗಳು ಬೆಂಗಳೂರಿನ ಅಕ್ಷಯ, ದಾವಣಗೆರೆಯ ಶ್ರೇಯಾ ದೊಡ್ಡಪ್ಪ, ವಿಜಯಪುರದ ರಾಧಿಕಾ ರಾಠೋಡ ಪಡೆದಿರುತ್ತಾರೆ.
ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನಗಳು ಹುಬ್ಬಳ್ಳಿಯ ಕುಮಾರಿ ಸಾನ್ವಿ ಯಾರಗೊಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ತ್ರಿನಯ ಎಸ್.ಕುಮಾರ್, ದ್ವಿತೀಯ ಬಹುಮಾನಗಳು ಬೆಂಗಳೂರಿನ ಯಲಹಂಕದ ಮಿಹೀತ್ ಕೆ. ಚಿತ್ರದುರ್ಗದ ನೆಹರ್ ಜೈನ್, ತೃತೀಯ ಬಹುಮಾನಗಳು ಚಿತ್ರದುರ್ಗದ ಧನುಶ್ರೀ, ದಾವಣಗೆರೆಯ ನಿಧಿಶ್ರೀ ಕೆ. ಸಮಾದಾನಕ ಬಹುಮಾನಗಳು ದಾವಣಗೆರೆಯ ಸಮಾನ್ವಿತಾ ಆರ್, ಚಿತ್ರದುರ್ಗದ ಗಾಯನ ಎಂ.ಟಿ. ಸೊಲ್ಲಾಪುರದ ದಿವಾಕರ್ ಎಸ್.ಜಿ. ವಿಜಯನಗರ ಜಿಲ್ಲೆಯ ಮುದ್ದೆಬಿಹಾಳ್‌ನ ಸಾಕ್ಷಿ ಮೌಲಡಿಗೇರ. ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗಿದೆ ಎಂದು ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ಪ್ರಕಟಿಸಿದ್ದಾರೆ.

