ಧರ್ಮಸ್ಥಳ : ಫೇಸ್ಬುಕ್ ಮುಖಪುಟದ ಹೆಸರಾಂತ ಸಾಹಿತ್ಯ ಬಳಗಗಳಲ್ಲಿ ಒಂದಾದ ಯುಗಾದಿ ಬಳಗದ ಸ್ನೇಹ ಪರ್ವ -೨ ಕಾರ್ಯಕ್ರಮ ಎಪ್ರಿಲ್ – ೨೬ ರಂದು ಧರ್ಮಸ್ಥಳ ನೇತ್ರಾವತಿ ಸಭಾoಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಬಿ ಭುಜಬಲಿಯವರು ವಹಿಸಿಕೊಂಡಿದ್ದು ಉದ್ಘಾಟನೆಯನ್ನು ಯುಗಾದಿ ಬಳಗದ ವ್ಯವಸ್ಥಾಪಕರು ನೆರವೇರಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪದ ಶ್ರೀ ಶಶಿಧರ್ ಎಲ್ಎಸ್ ಕೊಪ್ಪ, ತೀರ್ಥಹಳ್ಳಿಯ ಸತ್ಯಶೋಧ ಪತ್ರಿಕೆ ಸಂಪಾದಕರಾದ ಅರುಣ್ ಮಂಜುನಾಥ್, ಬೆಂಗಳೂರಿನ ಮಂಜುಳಾ ಪ್ರಸಾದ್ ಹಾಗೂ ರಾಜೇಶ್ವರಿ ಉಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುಗಾದಿ ಬಳಗದ ಹಿರಿಯರಿಗೆ ಯುಗಾದಿ ಮಾಣಿಕ್ಯ ಹಾಗೂ ಸಕ್ರಿಯ ಸದಸ್ಯರಿಗೆ ಯುಗಾದಿ ಐಸಿರಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸದಸ್ಯರಿಗೆ ಯುಗಾದಿ ಸುಜ್ಞಾನ ಸಿರಿ ಮತ್ತು ಪ್ರತಿಭಾ ಸಿರಿ ಗೌರವವನ್ನು ನೀಡಲಾಯಿತು.
ಯಲ್ಲಾಪುರದ ಶೈಲಾ ಭಟ್ ಸ್ವಾಗತಿಸಿ ಹೊನ್ನಾವರದ ಶ್ರೀನಾಥ್ ಪಿ. ಎಸ್ ಪ್ರಸ್ತಾವಿಕ ಭಾಷಣ ಮಾಡಿದರು. ಬೆಂಗಳೂರಿನ ಶೀಲತಾ ಭಾರ್ಗವ್ ಮತ್ತು ಉಜಿರೆಯ ಆಶಾ ಅಡೂರ್ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರಿನಸುಜಾತ ಭಟ್ ವಂದಿಸಿದರು ಅಕ್ಷತಾ ಅಡೂರ್ ಪ್ರಾರ್ಥನೆ ಹಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದ ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿಯ ವೀಣಾ ಉಮೇಶ್,ಆಮಂತ್ರಣದ ವಿಜಯಕುಮಾರ್ ಜೈನ್ ಹಾಗೂ ಅರುಣ್ ಜೈನ್ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಯುಗಾದಿ ಬಳಗದ ಸದಸ್ಯರು ಆಗಮಿಸಿ ಸ್ನೇಹ ಪರ್ವ -2 ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಿದರು.

