ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿನಂತಿದೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಹಿರಿಯ ಸಾಹಿತಿ, ಕವಯತ್ರಿ ಶ್ರೀಮತಿ ಕುಸುಮಾ ಲೋಕೇಶ್ ತಿಳಿಸಿದ್ದಾರೆ.
ಪ್ರಥಮ ಬಹುಮಾನಗಳು ಬೆಂಗಳೂರಿನ ಶ್ರೀಮತಿ ಸೀತಾ ವ್ಯಾಸಮುದ್ರಿ, ಧಾರವಾಡ ಜಿಲ್ಲೆಯ ಮಂಜುನಾಥ ನಗರದ ಸುಭಾಷ್ ಹೇಮಣ್ಣ ಚವಾಣ, ದ್ವಿತೀಯ ಬಹುಮಾನಗಳು ಬೆಳಗಾವಿ ಜಿಲ್ಲೆಯ ರಾಯಭಾಗದ ಸಾಗರ ಝಂಡೆನ್ನವರ್, ತುಮಕೂರು ಜಿಲ್ಲೆಯ ಕುಣಿಗಲ್‌ನ ಕ.ಚ.ಕೃಷ್ಣಪ್ಪ, ತೃತೀಯ ಬಹುಮಾನಗಳು ಮೈಸೂರಿನ ಶ್ರೀಮತಿ ಪ್ರಭಾ ಶಾಸ್ತ್ರಿ ಜೋಶ್ಯುಲ, ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀಮತಿ ಲತಾ ಹೆಚ್.ಭಟ್ ಪಡೆದಿರುತ್ತಾರೆ.
ಸಮಾಧಾನಕರ ಬಹುಮಾನಗಳು ದಾವಣಗೆರೆ ಜಿಲ್ಲೆಯ ನ್ಯಾಮತಿಯ ಕೃಷ್ಣನಾಯ್ಕ ಕೆ. ಕೊಡಗು ಜಿಲ್ಲೆಯ ಬಿಲ್ಲಮಾವಟಿಯ ಎಂ.ಡಿ.ಅಯ್ಯಪ್ಪ, ದಾವಣಗೆರೆಯ ಬಸವರಾಜಪ್ಪ ಡಿ.ಸಿ., ಮಂಗಳೂರಿನ ಡಾ. ಸುರೇಶ್ ನೆಗಳಗುಳಿ, ದಾವಣಗೆರೆಯ ಶ್ರೀಮತಿ ಕೋಮಲ ವಸಂತಕುಮಾರ್, ಧಾರವಾಡದ ಶ್ರೀಮತಿ ಸುಲೋಚನ ಮಾಲಿ ಪಾಟೀಲ್, ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವೆಂಕಟೇಶ್ ಬೈಲೂರು, ರಾಯಚೂರು ಜಿಲ್ಲೆಯ ಮಾಡಗಿರಿಯ ರಾಮಲಿಂಗ, ಉಡುಪಿಯ ಶ್ರೀಮತಿ ಶುಭಲಕ್ಷ್ಮಿ ಆರ್.ನಾಯಕ್ ಈ ಬಹುಮಾನ ಪಡೆದ ವಿಜೇತರೆಲ್ಲರಿಗೂ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.