ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾಜಮಂದಿರದಲ್ಲಿ ಶನಿವಾರ ನಡೆಯಿತು.
ರೋಟರಿ ಜಿಲ್ಲೆ 318 ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಅವರು ನೂತನ ಅಧ್ಯಕ್ಷ ಕರುಣಾಕರ್ ಭಂಡಾರಿ, ಕಾರ್ಯದರ್ಶಿ ಮುರಳಿಧರ್ ಕೋಟ್ಯಾನ್ ಹಾಗೂ ಸರ್ಜಂಟ್ ಎಟ್ ಆರ್ಮ್ ಕೆ.ಎಸ್ ಶೆಟ್ಟಿ ಅವರಿಗೆ ಪದಪ್ರದಾನ ನೆರವೇರಿಸಿದರು.
ಎಸ್‌ಎಸ್‌ಎಲ್‌ಸಿ, ಪಿ.ಯು.ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿ ವಿದ್ಯಾರ್ಥಿವೇತನ ನೀಡಲಾಯಿತು. ಕ್ಲಬ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಗೆ ರೂ.10 ಸಾವಿರ ದೇಣಿಗೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ವಿದೇಶ್.ಎಂ, ಕಾರ್ಯದರ್ಶಿ ಹರಿಪ್ರಸಾದ್ ಎಂ.ಸಿ, ಜೈನ್ ಮಿಲನ್ ಅಧ್ಯಕ್ಷ ಆಯ್ಕೆ ಮಹೇಂದ್ರ ಕುಮಾರ್ ಜೈನ್ ಹಾಗೂ ಮಾಜಿ ಅಸಿಸ್ಟೆಂಟ್ ಗವರ್ನರ್ ಶರತ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಅಸಿಸ್ಟೆಂಟ್ ಗವರ್ನರ್ ರಾಬರ್ಟ್ ಫ್ರ‍್ಯಾಂಕ್ಲಿನ್ ರೇಗೊ, ವಲಯ ಸೇನಾನಿ ತ್ಯಾಗರಾಜ ಆಚಾರ್ಯ ಉಪಸ್ಥಿತರಿದ್ದರು.
ಮಹಮ್ಮದ್ ಅಸ್ಲಾಂ ಮತ್ತು ಪ್ರತಾಪ್ ಕುಮಾರ್ ಜೈನ್ ನಿರೂಪಿಸಿದರು.