ಮಂಗಳೂರು ಊರ್ವ ಕೆನರಾ ದಲ್ಲಿ ರೋಟರಿ 26ನೇ ಚಿಣ್ಣರ ಉತ್ಸವ

0
3

ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ 26ನೇ ಚಿನ್ನರ ಉತ್ಸವ ಕಾರ್ಯಕ್ರಮ ಮಂಗಳೂರಿನ ಊರ್ವ ಕೆನರಾ ಪ್ರೌಢಶಾಲೆಯಲ್ಲಿ ನಡೆಯಿತು. ಮಂಗಳೂರು ಪರಿಸರದ ಎಲ್ಲ ವಸತಿ ಶಾಲೆಗಳ ವಿಶೇಷ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸುಮಾರು 450ಕ್ಕೂ ಹೆಚ್ಚು ಮಕ್ಕಳು ಇದರಲ್ಲಿ ಭಾಗವಹಿಸಿದ್ದರು.

ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಗಳಿಂದಲೂ ಕೂಡ ಮಕ್ಕಳು ಭಾಗವಹಿಸಿದ್ದು ಇದರ ವಿಶೇಷತೆಯಾಗಿತ್ತು ಸ್ಪರ್ಧಾಕೂಟವನ್ನು ಸ್ಥಳೀಯ ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ ದೀಪ ಬೆಳಗಿ ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ಶಾರೀರಿಕ ಹಾಗೂ ದೈಹಿಕ ಚಟುವಟಿಕೆಗಳ ಅಗತ್ಯದ ಬಗ್ಗೆ ವಿವರಿಸಿದರು. ಎಲ್ಲ ಮಕ್ಕಳಿಗೂ ಆಟೋಟಗಳಲ್ಲಿ ಸಂಭ್ರಮದಿಂದ ಭಾಗವಹಿಸಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯುವಂತೆ ಉತ್ತೇಜಿಸಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ರೋಟರಿ ವಲಯ ಅಧಿಕಾರಿಗಳಾದ ಪಿ ಪಿ ರಾಜೇಶ್ ಶೆಟ್ಟಿ, ಹಾಜರಿದ್ದರು ರೋಟರಿ ಕ್ಲಬ್ ಚೇರ್ಮನ್ ಡಾ ಬಿ ದೇವದಾಸ ರೈ ಪ್ರಾಸ್ತಾವಿಕ ಮಾತನಾಡಿ ಉತ್ಸವದ ಪ್ರಾಸಂಗಿಕತೆಯನ್ನು ತಿಳಿಸಿದರು. ರೋಟರಿ ಅಧ್ಯಕ್ಷ ಬಿ ಎನ್ ರವೀಂದ್ರ ಸ್ವಾಗತಿಸಿದರು. ಕೃಷ್ಣ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಾಕ್ಸನ್ ಸಾಲ್ದಾನ ವಂದಿಸಿದರು.

ವರದಿ ರಾಯಿ ರಾಜ ಕುಮಾರ್