ಇರುವೈಲು ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ರೂಪಾ ರಾಜೇಶ್ ಆಯ್ಕೆ

0
10

ಮೂಡುಬಿದಿರೆ : ಇರುವೈಲು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ರೂಪಾ ರಾಜೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಸಭೆಯು ಭಾನುವಾರ ಇರುವೈಲಿನ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಜೆ. ಶೆಟ್ಟಿ ಅವರನ್ನು ಗೌರವಾಧ್ಯಕ್ಷೆಯಾಗಿ ನೇಮಕ ಮಾಡಲಾಯಿತು.

ಉಪಾಧ್ಯಕ್ಷರಾಗಿ ಪೂರ್ಣಿಮಾ ಹಾಗೂ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಸೌಮ್ಯ ಮತ್ತು ಕವಿತಾ, ಕೋಶಾಧಿಕಾರಿಗಳಾಗಿ ಅಮಿತಾ ಕಟ್ಟಣಿಗೆ ಹಾಗೂ ವಿದ್ಯಾ ಪ್ರಶಾಂತ್, ಜತೆ ಕಾರ್ಯದರ್ಶಿಗಳಾಗಿ ಸ್ವಪ್ನಾ ಆಚಾರ್ಯ ಮತ್ತು ಮಮತಾ ದಿನೇಶ್ ಕಟ್ಟಣಿಗೆ ಅವಿರೋಧವಾಗಿ ಆಯ್ಕೆಯಾದರು.

ಲೆಕ್ಕಪರಿಶೋಧಕರಾಗಿ ಶರಣ್ಯ ಹಾಗೂ ತಾರಾವತಿ ಅವರನ್ನು ಆಯ್ಕೆ ಮಾಡಲಾಯಿತು. ಪೂಜಾ ಸಮಿತಿಯ ಸದಸ್ಯರಾಗಿ ರೇಣುಕಾ, ವಿನುತಾ ಆಚಾರ್ಯ, ಧನಲಕ್ಷ್ಮೀ, ಸುರೇಖಾ ಶೆಟ್ಟಿ, ಪ್ರತಿಭಾ ಶೆಟ್ಟಿ ಹಾಗೂ ಸೌಮ್ಯ ರಾಮಚಂದ್ರ ಅವರನ್ನು ನೇಮಕ ಮಾಡಲಾಯಿತು.

ಕೌಂಟರ್ ಸಮಿತಿಗೆ ಪೂರ್ಣಿಮಾ ಶೆಟ್ಟಿ, ಪ್ರಮೀಳಾ ಮತ್ತು ಸೇವಂತಿ, ಸ್ವಾಗತ ಸಮಿತಿಗೆ ಲಲಿತಾ ಹಾಗೂ ಹರಿಣಾಕ್ಷೀ ಅವರನ್ನು ಆಯ್ಕೆ ಮಾಡಲಾಯಿತು.

ಪ್ರದೀಪ್ ಶೆಟ್ಟಿ, ಐ. ರಾಘವೇಂದ್ರ ಭಟ್, ಪದ್ಮನಾಭ ಪೂಜಾರಿ ಹಾಗೂ ದೀಪ ದಿನೇಶ್ ಬಟಾರ ಸಭೆಯಲ್ಲಿ ಉಪಸ್ಥಿತರಿದ್ದರು.