
ದಾವಣಗೆರೆ : ಬೆಳಗಾವಿಯ ನಾಗರ ಮುನ್ನೋಳಿಯ ಕವಿತ್ತ ಕರ್ಮಮಣಿ ಫೌಂಡೇಷನ್ ವತಿಯಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಅವರ ಸಾಧನೆಗಳನ್ನು ಗುರುತಿಸಿ “ಕಲಾವಿಭೂಷಣ’’ ರಾಷ್ಟç ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕವಿತ್ತ ಕರ್ಮಮಣಿ ಫೌಂಡೇಷನ್ ಸಂಸ್ಥಾಪಕರಾದ ಕವಿತ್ತ ಕರ್ಮಮಣಿ ತಿಳಿಸಿದ್ದಾರೆ.
ದಾವಣಗೆರೆ ವಾಣಿಜ್ಯ ನಗರಿಯನ್ನು ಸಾಂಸ್ಕೃತಿಕ ನಗರಿಯಾಗಿ ಬದಲಾಯಿಸಿ ಕಳೆದ 4 ದಶಕಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರು ಶೆಣೈಯವರಿಗೆ ತುಂಬಾ ತುಂಬಾ ಹರ್ಷವೆನಿಸುತ್ತದೆ ಎಂದು ಸಮಿತಿ ಸದಸ್ಯರು ಪ್ರಕಟಿಸಿದ್ದಾರೆ.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ ಸಂಸ್ಥೆ, ಬಿಚ್ಕತ್ತಿ ಕುಟುಂಬ, ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಸಿನಿಮಾಸಿರಿ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಶ್ರೀ ಗಾಯಿತ್ರಿ ಪರಿವಾರ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಗಮ ಸಂಗೀತ ಪರಿಷತ್, ಸಮಾನ ಮನಸ್ಕರ ವೇದಿಕೆ, ಕಾವೇರಿ ಸಾಂಸ್ಕೃತಿಕ ವೇದಿಕೆ, ಕರಾವಳಿ ಮಿತ್ರ ಮಂಡಳಿಯ ಮುಂತಾದ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.
