ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಮುಡಿಪು ವಲಯದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿ ಹೊಲಿಗೆ ತರಬೇತಿಯನ್ನು ತಾಲೂಕಿನ ಯೋಜನಾಧಿಕಾರಿಯವರಾದ ಸುರೇಶ್ ಗೌಡ ಸರ್ ಉದ್ಘಾಟನೆ ಮಾಡಿ ಮಹಿಳೆಯರು ಸ್ವಉದ್ಯೋಗ ಮಾಡಿ ತಮ್ಮ ಕಾಲ ಮೇಲೆ ತಾವೇ ನಿಲ್ಲುವಂತೆ ಆಗಬೇಕು ಈ ಉದ್ದೇಶವನ್ನು ಇಟ್ಟುಕ್ಕೊಂಡು ಉಚಿತ ಹೊಲಿಗೆ ತರಬೇತಿ ನಡೆಸಲಾಗುತ್ತದೆ. ಸದಸ್ಯರು ಹಾಗೂ ಮನೆಯವರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಯೋಜನೆಯ ಮೂಲಕ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮ ಅಧ್ಯಕ್ಷತೆಯನ್ನು ಭಾರತೀ ಶಾಲೆ ಮುಖ್ಯೋಪಧ್ಯಾಯರಾದ ವಿಜಯಲಕ್ಷ್ಮಿ ಮೇಡಂ ವಹಿಸಿ ಯೋಜನೆಯು ಇಂತಹ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು 3 ತಿಂಗಳು ಇದರ ತರಬೇತಿ ಉತ್ತಮವಾಗಿ ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಶ್ವಕರ್ಮ ಬ್ಯಾಂಕ್ ಮೆನೆಜರ್ ಪ್ರಸಾದ್, ಸಿಂಧೂರ ಮಾತೃ ಮಂಡಳಿ ಗೌರವಧ್ಯಕ್ಷರಾದ ಶಶಿಕಲಾ, ಹೊಲಿಗೆ ಶಿಕ್ಷಕರಾದ ರೇಣುಕಾರವರು ಶುಭ ಹಾರೈಸಿದರು. ಕಾರ್ಯಕ್ರಮ ನಿರೂಪಣೆ ವಲಯ ಮೇಲ್ವಿಚಾರಕರಾದ ಪ್ರೇಮಲತ ಮೇಡಂ, ಸ್ವಾಗತವನ್ನು ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ, ಸೇವಾಪ್ರತಿನಿಧಿ ಶಕೀಲಾ ವಂದಿಸಿದರು.

