ಉಡುಪಿ : ಸನಾತನ ಸಂಸ್ಥೆ ವತಿಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಭಾರತೀಯ ಸಂಸ್ಕೃತಿ, ಸುಸಂಸ್ಕಾರ ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ “ಸನಾತನ ಸಂಸ್ಕಾರ ತರಬೇತಿ ವರ್ಗ – 2026” ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.

ಈ ತರಬೇತಿ ವರ್ಗವು ಮೇ 15ರಿಂದ 19ರವರೆಗೆ ಉಡುಪಿಯ ಒಂತಿಬೆಟ್ಟು ಇಲ್ಲಿನ ರಾಜಪುರ ಸಾರಸ್ವತ ಬ್ರಾಹ್ಮಣ ಸಂಘದ ಸಭಾಂಗಣದಲ್ಲಿ ನಡೆಯಿತು.
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಂಸ್ಕಾರಯುತ ಶಿಕ್ಷಣ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ ವಿವಿಧ ಸಂಸ್ಕಾರಾಧಾರಿತ ಚಟುವಟಿಕೆಗಳು, ನೈತಿಕ ಮೌಲ್ಯಗಳ ಬೋಧನೆ ಹಾಗೂ ವ್ಯಕ್ತಿತ್ವ ವಿಕಾಸ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.

ಈ ಸಂದರ್ಭದಲ್ಲಿ ರಾಜಪುರ ಸಾರಸ್ವತ ಸಭಾ ಭವನದ ಶ್ರೀ ನವೀನ್ ಪ್ರಭು, ಮಕ್ಕಳ ಪೋಷಕರು ಹಾಗೂ ಸನಾತನ ಸಂಸ್ಥೆಯ ಸೌ. ಅಶ್ವಿನಿ ನಾಯಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

