ಮೂಡುಬಿದಿರೆಯಲ್ಲಿ 12 ಮಂದಿ ಜ್ಞಾನದೀಪ ಶಿಕ್ಷಕಿಯರಿಗೆ ಮಂಜೂರಾತಿ ಪತ್ರ ವಿತರಣೆ

0
3

ರಾಜ್ಯದಲ್ಲಿ ಒಂದು ಸಾವಿರ ಜ್ಞಾನದೀಪ ಶಿಕ್ಷಕಿಯರ ನಿಯೋಜನೆ : ಆನಂದ ಸುವರ್ಣ

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜ್ಞಾನ ದೀಪ ಯೋಜನೆಯಡಿ ರಾಜ್ಯದ ವಿವಿಧ ಶಾಲೆಗಳಿಗೆ ಒಂದು ಸಾವಿರ ಶಿಕ್ಷಕಿಯರನ್ನು ನಿಯೋಜಿಸಿದೆ ಮತ್ತು ಬಡ ವಿದ್ಯಾಥಿ೯ಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ 125 ಕೋ. ರೂ ಸ್ಕಾಲರ್ ಶಿಫ್ ನೀಡಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರು ಆನಂದ ಸುವಣ೯ ಹೇಳಿದರು.

ಅವರು ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ “ಜ್ಞಾನ ದೀಪ” ಯೋಜನೆಯಲ್ಲಿ ಆಯ್ಕೆಯಾಗಿರುವ ತಾಲೂಕಿನ 12 ಮಂದಿ ಶಿಕ್ಷಕಿಯರಿಗೆ ಪೊನ್ನೆಚಾರಿ ವೆಂಕಟರಮಣ ದೇವಸ್ಥಾನ ಸಭಾಂಗಣದಲ್ಲಿ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಕರಿಲ್ಲದೆ, ಮೂಲಭೂತ ಸೌಕಯ೯ಗಳಿಲ್ಲದೆ ಬಡ ವಿದ್ಯಾಥಿ೯ಗಳು ಶಿಕ್ಷಣದಿಂದ ವಂಚಿತರಾಗದೆ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕೆಂಬ ಉದ್ದೇಶದಿಂದ ಹೆಗ್ಗಡೆ ಅವರು ಶಾಲೆಗಳಿಗೆ ವಿವಿಧ ಯೋಜನೆಗಳನ್ನು ರೂಪಿಸಿದರು.

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಒಂದೇ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡುತ್ತಿಲ್ಲ ಬದಲಾಗಿ ಅನಾಥರಿಗೆ, ನಿಗ೯ತಿಕರಿಗೆ, ಅಸಕ್ತರಿಗೆ, ಸಾಮಾಜಿಕ ಕ್ಷೇತ್ರಕ್ಕೆ, ಶಾಲೆಗಳಿಗೆ, ಶ್ರದ್ಧಾಕೇಂದ್ರಗಳಿಗೆ, ಕೃಷಿಕರಿಗೆ, ಶಿಕ್ಷಕರಿಯರಿಗೆ ಹಾಗೂ ವಿದ್ಯಾಥಿ೯ಗಳಿಗೆ ಸ್ಕಾಲರ್ ಶಿಫ್, ಕೆರೆಗಳ ಅಭಿವೃದ್ಧಿ, ಶುದ್ಧ ನೀರು, ಸಮಾಜ ಮಂದಿರಗಳ ನಿಮಾ೯ಣ, ವಿಪತ್ತು ನಿವ೯ಹಣೆ ತಂಡ ಹೀಗೆ ವಿವಿಧ ಕ್ಷೇತ್ರಗಳಿಗೆ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶಿಕ್ಷಕರು ಇದನ್ನೆಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರನ್ನು ಸತ್ಪ್ರಜೆಗಳಾಗಿ ರೂಪಿಸಬೇಕಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯ ನ ವ್ಯಕ್ತಿತ್ವವನ್ನು ನಿಮಾ೯ಣ ಮಾಡುವವರು ಶಿಕ್ಷಕರು. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕಿ, ಗೌರವಯುತವಾಗಿ ಬದುಕುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಿತ್ತಬೈಲು ವಾಸುದೇವ ನಾಯಕ್, ದ. ಕ ಜಿಲ್ಲೆಯ ನಿದೇ೯ಶಕ ದಿನೇಶ್, ಬಾಬು ರಾಜೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ತೆರೆಜಾ ಕಡೋ೯ಜಾ ಅತಿಥಿಗಳಾಗಿ ಭಾಗವಹಿಸಿದ್ದರು.

ತಾಲೂಕು ಯೋಜನಾಧಿಕಾರಿ ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮನ್ವಯಾಧಿಕಾರಿ ವಿನುತ ಕಾಯ೯ಕ್ರಮ ನಿರೂಪಿಸಿದರು. ತಾಲೂಕು ಲೆಕ್ಕ ಪರಿಶೋಧಕ ವಸಂತ್ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕರು, ಜ್ಯಾನದೀಪ ಶಿಕ್ಷಕರು, ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.