ರೋಟರಿ ಜಿಲ್ಲಾ ಗವರ್ನರ್ ಆಗಿ ಜೂನ್ 28ರಂದು ಸತೀಶ್ ಬೋಳಾರ್ ಆಯ್ಕೆ

0
24

ಮಂಗಳೂರು : ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 31 81ರ ಜಿಲ್ಲಾ ಗವರ್ನರ್ ಆಗಿ ಸತೀಶ್ ಬೋಳಾರ್ ಜೂನ್ 28ರಂದು ಮಂಗಳೂರಿನ ಪಿಲಿಕುಳ ಸ್ಕೌಟ್ಸ್ ಗೈಡ್ಸ್ ತರಬೇತಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ದ ಕ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು 31 81 ಒಳಗೊಂಡಿದೆ.

ಸುಮಾರು 18 ವರ್ಷಗಳಿಂದ ಸಮಾಜಸೇವೆ, ಸಮುದಾಯ ಅಭಿವೃದ್ಧಿ ಹಾಗೂ ನಾಯಕತ್ವದಲ್ಲಿ ಸಕ್ರಿಯವಾಗಿರುವ ಸತೀಶ್ ಅವರು 91 ರೋಟರಿ ಕ್ಲಬ್, 3800ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ರೋಟರಿ ಜಿಲ್ಲೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ. ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಯುವ ಸಬಲೀಕರಣ, ಮಹಿಳಾ ಅಭಿವೃದ್ಧಿ, ಹಿರಿಯ ನಾಗರಿಕರ ಕಲ್ಯಾಣ ಹಾಗೂ ಇತರ ಸಾಮಾಜಿಕ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸತೀಶ್ ಬೋಳಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಧನ್ಯವಾದ ಯೋಜನೆ ಅಡಿ 10,000ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಜನ ಸಂಜೀವಿನಿ ಮೂಲಕ ಜಲ ಸಂರಕ್ಷಣೆ, ಪರಿಸರ ಜಾಗೃತಿ, ಅರಣ್ಯ ಮಿತ್ರ ಕಾರ್ಯಕ್ರಮ ನಡೆಯಲಿದೆ. ಆರೋಗ್ಯ ಕ್ಷೇತ್ರದಲ್ಲಿ ತುರ್ತು ಚಿಕಿತ್ಸಾ, ರಕ್ತ ನಿಧಿ, ಸ್ತ್ರೀಸುರಕ್ಷಾ, ಕ್ಯಾನ್ಸರ್ ಜಾಗೃತಿ, ತಾಯಿ ಮತ್ತು ಶಿಶು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಯುವಜನಾ ಅಭಿವೃದ್ಧಿ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸಂಚಾರ ಸುರಕ್ಷತೆ ಇತ್ಯಾದಿ ಅರಿವು ಮೂಡಿಸಿ ನಾಯಕತ್ವ ಗುಣ ಬೆಳೆಸಲು ಪ್ರಯತ್ನಿಸಲಾಗುವುದು. ಪೋಲಿಯೋ ನಿರ್ಮೂಲನೆ, ಲಸಿಕಾ ಜಾಗೃತಿ, ಇತ್ಯಾದಿ ಆರೋಗ್ಯ ಶಿಬಿರಗಳು ನಡೆಯಲಿವೆ. ಪಟ್ಟೆಕಾಗೋಷ್ಠಿಯಲ್ಲಿ ಮಾಜಿ ಗವರ್ನರ್ ವಿಕ್ರಂ ದತ್ತ, ಕಾರ್ಯದರ್ಶಿ ಜಿ ಕೆ ಶೆಟ್ಟಿ, ಸಮಿತಿ ಸಂಯೋಜಕ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು.
.

LEAVE A REPLY

Please enter your comment!
Please enter your name here