ಸೌಮ್ಯ ಶೆಟ್ಟಿ ಕವನ ಸಂಕಲನ ಮಸಿಯ ಮಾತು ಬಿಡುಗಡೆ

0
30

ಮೂಡುಬಿದಿರೆ : ಆಳ್ವಾಸ್ ಪ್ರೌಢಶಾಲಾ ಶಿಕ್ಷಕಿ ಸೌಮ್ಯ ತಿಲಕ್ ಶೆಟ್ಟಿ ಅವರ ಮಸಿಯ ಮಾತು ಕವನ ಸಂಕಲನ ಜೂನ್ 26ರಂದು ಕುವೆಂಪು ಸಭಾಭವನದಲ್ಲಿ ಬಿಡುಗಡೆಯಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವಾ ಕೃತಿಯನ್ನು ಲೋಕಾರ್ಪಣೆಗೊಳಿಸಿ ಸಹಿ ಹಾಕುವ ಮೂಲಕ ಬಿಡುಗಡೆಗೊಳಿಸಿದರು.

ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮನಸ್ಸಿನ ಭಾವನೆಗಳನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸುತ್ತಿರುವ ಕವನಗಳು ಮನಸ್ಸಿಗೆ ಹೆಚ್ಚು ಮುದ ಕೊಡುತ್ತವೆ ಎಂದರು. ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಿಶ್ರಾಂತ ಕುಲ ಸಚಿವ, ಎಕ್ಸಲೆಂಟ್ ಆಡಳಿತ ನಿರ್ದೇಶಕ ಡಾ ಬಿ ಪಿ ಸಂಪತ್ ಕುಮಾರ್, ಕೃತಿಗಾರ್ತಿ ಸೌಮ್ಯ ಶೆಟ್ಟಿ, ಉಜಿರೆಯ ಆಶಾ ಅಡೂರು, ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ವಿಜಯಕುಮಾರ್ ಜೈನ್, ಹಾಜರಿದ್ದರು. ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here