- ವಿಜ್ಞಾನ ವಿಭಾಗದ ಶ್ರೀರಕ್ಷಾ 596 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರಾಂಕ್ , ಅನಘಾ ಡಿ ಶೆಟ್ಟಿ 595 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ರಾಂಕ್
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಏಪ್ರಿಲ್‌ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶ್ರೀರಕ್ಷಾ 596 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರಾಂಕ್ ಪಡೆದಿರುತ್ತಾರೆ. ಇವರು ಬಾಯಾರಿನ ಗಣಪತಿ ಭಟ್ ಹಾಗೂ ಗಾಯತ್ರಿ ದಂಪತಿಗಳ ಪುತ್ರಿ. ಅನಘಾ ಡಿ ಶೆಟ್ಟಿ 595 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ರಾಂಕ್ ಪಡೆದುಕೊಂಡಿದ್ದಾರೆ. ಇವರು ಪುತ್ತೂರಿನ ದಿನೇಶ್ ಶೆಟ್ಟಿ ಹಾಗೂ ಸವಿತಾ ಡಿ. ಶೆಟ್ಟಿ ದಂಪತಿಗಳ ಪುತ್ರಿ. ಆಕಾಶ್ (ಪಾಣೆಮಂಗಳೂರಿನ ಚಂದ್ರಶೇಖರ ಹಾಗೂ ಲೀಲಾ ದಂಪತಿಗಳ ಪುತ್ರ) ಹಾಗೂ ಯಶ್ವಿತಾ ಕುಲಾಲ್(ಬಂಟ್ವಾಳ ತಾಲೂಕಿನ ದಿನೇಶ್ ಕೆ ಹಾಗೂ ಸುಮತಿ ದಂಪತಿಗಳ ಪುತ್ರಿ) ತಲಾ 591 ಅಂಕಗಳೊಂದಿಗೆ 10ನೇ ರಾಂಕ್ ಪಡೆದಿರುತ್ತಾರೆ.
ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಅನುಶ್ರೀ (ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪಿ. ಸತೀಶ್‌ಮರಡಿತ್ತಾಯ ಹಾಗೂ ದೀಪಾ ದಂಪತಿಗಳ ಪುತ್ರಿ) 597 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ರಾಂಕ್ ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಕಲಾವಿಭಾಗದಲ್ಲಿ ಪಿ. ಯುಕ್ತಶ್ರೀ(ಬೆಂಗಳೂರಿನ ಪಿ ಹೇಮಚಂದ್ರ ಹಾಗೂ ಹೈಮಿತಾ ಪಿ ದಂಪತಿಗಳ ಪುತ್ರಿ) 593 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಉಪಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.