ಮಂಗಳೂರು : ಹಿರಿಯ ಗಾಂಧಿವಾದಿ, ತುಳು-ಕನ್ನಡ ಲೇಖಕ ಕೆ.ಟಿ.ಆಳ್ವರ ಕುರಿತು ಚಂದ್ರಹಾಸ ಕಣಂತೂರು ಅವರು ಬರೆದಿರುವ ರ‍್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಕೃತಿ ಬಿಡುಗಡೆ ಕಾರ‍್ಯಕ್ರಮ ಸೆ.13 ರಂದು ಬೆಳಿಗ್ಗೆ 10 ಗಂಟೆಗೆ ಮುಡಿಪು ಪೂಪಾಡಿಕಲ್ಲ್ ಸರಕಾರಿ ಹಿ.ಪ್ರಾ.ಶಾಲೆ ಶಾಲೆಯಲ್ಲಿ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೆ.ಟಿ ಆಳ್ವ ಗುರುವಂದನಾ ಸಮಿತಿ ಇವರ ಸಹಯೋಗದಲ್ಲಿ ನಡೆಯುವ ಈ ಕರ‍್ಯಕ್ರಮದಲ್ಲಿ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ.ಆಳ್ವೆರ್ ‘ ಕೃತಿಯನ್ನು ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಬಿಡುಗಡೆ ಮಾಡುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಎಲ್ ಧರ್ಮ ಅವರು ಕೆ.ಟಿ.ಆಳ್ವರ ಕುರಿತಾಗಿ ನರ‍್ಮಾಣಗೊಂಡ ಸಾಕ್ಷ್ಯಚಿತ್ರ ಬಿಡುಗಡೆ ಮಾಡುವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಕರ‍್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಜೊತೆ ಕಾರ್ಯದರ್ಶಿ ಕಲ್ಲೂರು ನಾಗೇಶ ಕೃತಿ ಅವಲೋಕನ ಮಾಡುವರು.ಖ್ಯಾತ ಗಾಯಕ ನಾದ ಮಣಿನಾಲ್ಕೂರು ಅವರು ಪದರಂಗಿತ ನಡೆಸಿಕೊಡುವರು.
ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್, ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೋಕ್ತೆಸರಾದ ದೇವಿಪ್ರಸಾದ್ ಪೊಯ್ಯತ್ತಾಯ, ಹಿರಿಯ ದೈವ ರ‍್ತಕರಾದ ಲಕ್ಷ್ಮಣ ಯಾನೆ ಕಾಂತ ಕಣಂತೂರು, ಸ್ಕೌಟ್ಸ್ ಮತ್ತು ಗೈಡ್ಸ್ ಮುಡಿಪು ವಲಯದ ಅಧಕ್ಷ ರಮೇಶ್ ಶೇಣವ ಚಕ್ರಕೋಡಿ, ನರಿಂಗಾನ ಕಂಬಳ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕಾಜವ, ಜನಜೀವನ ಬಾಳೆಪುಣಿಯ ಅಧ್ಯಕ್ಷ ರಾಧಕೃಷ್ಣ ರೈ ಉಮಿಯ, ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಎಸ್ ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ , ಗುರುವಂದನಾ ಸಮಿತಿಯ ಪುಂಡಾರೀಕಾಕ್ಷ ಕುಲಾಲ್, ಡಾ.ಇಸ್ಮಾಯಿಲ್ ಉಪಸ್ಥಿತರಿರುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

