ಉಡುಪಿ UCEA ವತಿಯಿಂದ ಸುರೇಶ್ ನಾಯ್ಕ್ ರವರಿಗೆ ಗೌರವಾರ್ಪಣೆ

0
32

ಉಡುಪಿ: ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ (ರಿ.) ಇದರ ಎಂಜಿನಿಯರ್ ಮೀಟ್ ಕಾರ್ಯಕ್ರಮವು ಕಿದಿಯೂರು ಹೋಟೆಲಿನ ಅನಂತಶಯನ  ಸಭಾಂಗಣದಲ್ಲಿ  ಜರಗಿತು.

ವೇದಿಕೆಯಲ್ಲಿ  ಅತಿಥಿಗಳಾಗಿ ಸಿಂಟ ಆಸ್ಟ್ರೀಸ್ ( SIMTA -ASTRIX )  UPVC  ವಿಂಡೋಸ್ ಕಂಪನಿಯ ರೀಜನಲ್ ಮ್ಯಾನೇಜರ್  ಮೋಹನ್ , ಉಡುಪಿ ಅಲ್ಯೂಮಿನಿಯಂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾಯ್ಕ್ ,   ಸಿಂಮ್ಟ ಆಸ್ಟ್ರೀಸ್ ( SIMTA -ASTRIX )  UPVC  ವಿಂಡೋಸ್ ಕಂಪನಿಯ ಪ್ರಾಜೆಕ್ಟ್ ಹೆಡ್ ಸುನಿಲ್  ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥರಿದ್ದರು.

ಸಿಂಮ್ಟ ಆಸ್ಟ್ರೀಸ್ ( SIMTA -ASTRIX )  UPVC  ವಿಂಡೋಸ್ ,ಡೋರ್ಸ್ ಸಿಸ್ಟಮ್ಸ್   ಬಗ್ಗೆ  ಆಧುನಿಕ ತಂತ್ರಜ್ಞಾನ ಕುರಿತು   ಮಾಹಿತಿ ಕಾರ್ಯಾಗಾರ ನೆಡೆಸಿಕೊಟ್ಟರು.  ಮುಖ್ಯ ಅತಿಥಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ  ಉಡುಪಿ ಅಲ್ಯೂಮಿನಿಯಂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾಯ್ಕ್ ರವರು  ಧಾರ್ಮಿಕ , ಸಾಮಾಜಿಕ  , ವ್ಯವಹಾರಿಕ   ಕ್ಷೇತ್ರದಲ್ಲಿ  ಕರ್ನಾಟದಲ್ಲಿಯೇ ಪ್ರಸಿದ್ಧ ಪಡೆದು   ಅತೀ ದೊಡ್ಡ ವಿಶೇಷ ಸಾಧನೆಗೆ  ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಹೂ ಹಾರ ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ವೇದಿಕೆಯಲ್ಲಿ ಸಂಸ್ಥೆಯ  ಉಪಾಧ್ಯಕ್ಷರಾದ  ಗಣೇಶ್ ಬೈಲೂರು , ಭರತ್ ಭೂಷಣ ,  ಸಂಸ್ಥೆಯ ಅಧ್ಯಕ್ಷರಾದ ಕೆ. ರಂಜನ್ ಸ್ವಾಗತಿಸಿದರು.  ಜೊತೆ ಕಾರ್ಯದರ್ಶಿ ಅನಂತೇಶ್ ಆಚಾರ್ಯ ವದನಾರ್ಪಣೆಗೈದರು.  ಖಜಾಂಚಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯಾಯ ಪ್ರಾರ್ಥನೆ ಮಾಡಿದರು. ಪಟ್ಟಾಭಿರಾಮ  ನಿರೂಪಣೆಗೈದರು. 

LEAVE A REPLY

Please enter your comment!
Please enter your name here