ಶಿರ್ತಾಡಿ ಗುರು ಜಯಂತಿ, ನವೀಕೃತ ಕಟ್ಟಡ ಉದ್ಘಾಟನೆ

0
49

ವರದಿ ರಾಯಿ ರಾಜ ಕುಮಾರ

ಶಿರ್ತಾಡಿಯ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ಮಹಿಳಾ ಘಟಕ ಗಳ ಆಶ್ರಯದಲ್ಲಿ ಫೆಬ್ರವರಿ ಒಂದರಂದು ನವೀಕೃತ ಕಟ್ಟಡದ ಉದ್ಘಾಟನೆ, ಗುರು ಜಯಂತಿ, ಲಕ್ಷ ತುಳಸಿ ಅರ್ಚನೆಗಳು ಜರಗಿದವು.
ನವೀಕೃತ ಕಟ್ಟಡದ ಗೋಪುರವನ್ನು ಉದ್ಘಾಟಿಸಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ಮಾತನಾಡಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಸಂಘಕ್ಕಾಗಿ ದುಡಿಯಬೇಕು. ಸಮಾನ ಮನಸ್ಸಿನಿಂದ ಎಲ್ಲರೂ ದೃಢವಾಗಿ ಸಂಘವನ್ನು ಬೆಳೆಸಿದಲ್ಲಿ ಸಮಾಜಕ್ಕೂ ಉಪಕಾರಿಯಾಗಲು ಸಾಧ್ಯ ಇದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಜಿ ತಾಲೂಕು ಪಂಚಾಯತ್ ಸದಸ್ಯ ರುಕ್ಕಯ್ಯ ಪೂಜಾರಿ, ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕುಮಾರಿ ರಕ್ಷಿತಾ, ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕುಮಾರ್ ಮಾಂಟ್ರಾಡಿ, ವಸಂತ ಪೂಜಾರಿ, ನಾಭಿರಾಜ ಸುವರ್ಣ, ರವರುಗಳನ್ನು ಸನ್ಮಾನಿಸಲಾಯಿತು.

ವಾಲ್ಪಾಡಿ, ಶಿರ್ತಾಡಿ, ನೆಲ್ಲಿಕಾರು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಆಯ್ಕೆಗೊಂಡ ನೂತನ ಸದಸ್ಯರುಗಳನ್ನು ಗೌರವಿಸಲಾಯಿತು. ಉತ್ತಮ ಚಟುವಟಿಕೆಯನ್ನು ತೋರಿದ ಅಳಿಯೂರು ಗ್ರಾಮ ಸಮಿತಿಯನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸೋಮನಾಥ ಶಾಂತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರದೇಶಕ್ಕೆ ನಿರ್ದೇಶಕ ಆನಂದ ಸುವರ್ಣ, ಸಂತೋಷ್ ಪೂಜಾರಿ, ಪಿಕೆ ರಾಜು ಪೂಜಾರಿ, ಸುರೇಶ್ ಪೂಜಾರಿ, ಸಂತೋಷ್ ಕೋಟ್ಯಾನ್, ಅಶೋಕ್, ರಶ್ಮಿತಾ, ಮಹಿಳಾ ಸಂಘದ ಅಧ್ಯಕ್ಷೆ ಸುಗಂಧಿ, ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್ ಹಾಜರಿದ್ದರು.

ಬೆಳಗ್ಗೆ ಗುರು ಪೂಜೆ, ನಕ್ಷ ತುಳಸಿ ಅರ್ಚನೆ, ಇತ್ಯಾದಿಗಳ ತರುವಾಯ ಸಂಘದ ಸದಸ್ಯರ ಮಕ್ಕಳಿಂದ ನೃತ್ಯ ವೈಭವ ಇತ್ಯಾದಿ ಕಾರ್ಯಕ್ರಮಗಳು ಜರುಗಿತು.
.

LEAVE A REPLY

Please enter your comment!
Please enter your name here