ಶಿರೂರು ಪರ್ಯಾಯ : ಬೆಳ್ತಂಗಡಿಯಿಂದ ಹೊರೆಕಾಣಿಕೆ

0
51

ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಯವರ ಪರ್ಯಾಯ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕಿನಿಂದ ಬ್ರಹತ್ ಹೊರೆಕಾಣಿಕೆ ಶ್ರೀ ಕೃಷ್ಣ ಮಠಕ್ಕೆ ಸಮರ್ಪಣೆಗೊಳ್ಳಲಿದೆ ಎಂದು ಉಜಿರೆಯ ಶಾರದಾ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಹರೀಶ್ ಪೂಂಜಾ ವಿಶ್ವಾಸ ವ್ಯಕ್ತಪಡಿಸಿದಿರು.

ಈ ಸಭೆಯಲ್ಲಿ ಪರ್ಯಾಯ ಸ್ವಾಗತ ಸಮಿತಿ ಯ ಸಂಚಾಲಕರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ ಉಜಿರೆ ಧರ್ಮಸ್ಥಳ ಮತ್ತು ಶ್ರೀ ಕೃಷ್ಣ ಮಠದ ನಡುವೆ ಅವಿನಾಭಾವ ಸಂಬಂಧ ಇದೆ ಅದಕ್ಕೆ ಪೂರಕವಾಗಿ ಶ್ರೀ ಶಿರೂರು ಸ್ವಾಮೀಜಿಯವರ ಪೂರ್ವಶ್ರಮ ಬೆಳ್ತಂಗಡಿ ತಾಲೂಕ ಆಗಿರುವುರಿಂದ ಮತ್ತಷ್ಟು ಭಾವನೆಗಳ ಸಂಬಂಧ ಆಗಿದೆ ಹಾಗಾಗಿ ಪರ್ಯಾಯ ಮತ್ತು ಹೊರೆಕಾಣಿಕೆಯ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿ ಸಹಕಾರವನ್ನು ಯಾಚಿಸಿದರು.

ಈ ಸಭೆಯಲ್ಲಿ ಜನಾರ್ದನ ದೇವಸ್ಥಾನದ ಅನ್ನುವಂಶಿಕ ಮೊಕ್ತೆಶ್ವರ ಶರತಕೃಷ್ಣ ಪದ್ವೆಂತರಾಯರು,ಉದ್ಯಮಿ ಮೋಹನ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷರು ಉಷಾ ಕಿರಣ್ , ಮಧುಕರ್ ಪರ್ಯಾಯ ಸಮಿತಿಯ ವಿಷ್ಣುಪ್ರಸಾದ್ ಪಾಡಿಗಾರ್, ಶ್ರೀನಿವಾಸ್ ಭಾದ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here