ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನ ಉಡುಪಿ ” ಅಖಂಡ ರಾಮ ನಾಮ ಜಪ ಅಭಿಯಾನ ” ಸ್ವಪನ್ನ

0
161

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ್  ದೇವಸ್ಥಾನ ತೆಂಕಪೇಟೆ ಉಡುಪಿ  , 125 ನೇ ಅಖಂಡ  ಭಜನಾ ಸಪ್ತಾಹಮೊಹೋತ್ಸವ  ಹಾಗೂ  ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವ ಮಠ ಪರಂಪರೆಯ  550 ವರ್ಷದ  ಆಚರಣೆಯ  ಪ್ರಯುಕ್ತ  ಸಂಕಲ್ಪಿತಾಃ  550 ಕೋಟಿ ಶ್ರೀ  ರಾಮ ನಾಮ ಜಪ ಅಭಿಯಾನವು  ಶ್ರೀ ದೇವರ ಸನ್ನಿಧಿಯಲ್ಲಿ ನಿರಂತರ  ನಡೆಯುತ್ತಿರುವ  ಶುಭ ಸಂದರ್ಭದಲ್ಲಿ  24  ಗಂಟೆಗಳಕಾಲ ನಿರಂತರ .           

  ” ಅಖಂಡ  ರಾಮ ನಾಮ ಜಪ ಅಭಿಯಾನ  ”  ಆಗಸ್ಟ್  9 ರ  ಸಂಜೆ  4 ರಿಂದ  ಆರಂಭ ಗೊಂಡು ಆಗಸ್ಟ್ 10 ರ ಸಂಜೆ  7.30 ವರೆಗೆ  ನೂರಾರು  ರಾಮ ಭಕ್ತರ  ಸಹಕಾರದಲ್ಲಿ  27 , 78 , 515  ಜಪ ಅನುಷ್ಠಾನ ಸ್ವಪನ್ನಗೊಂಡಿತ್ತು. 

ಶ್ರೀ ರಾಮ ನಾಮ ಜಪ ಸಮಿತಿಯ ಶಂಕರ್ ಶೆಣೈ , ದೀಪಕ್ ಶಾನ್ ಬೋಗ್ , ರಾಜೇಶ್ ಪೈ ,  ಭಾಸ್ಕರ್ ಶೆಣೈ ,  ಭಜನಾ ಮಂಡಳಿಯ  ಅಧ್ಯಕ್ಷ  ಮಟ್ಟಾರ್ ಸತೀಶ್   ಕಿಣಿ ,   ವೆಂಕಟೇಶ್ ಕಾಮತ್ , ಸುಧಾ ಪೈ ಹಾಗೂ  ಅರ್ಚಕ ವೃಂದದವರು , ನೂರಾರು ಭಕ್ತರೂ ಸಹಕರಿಸಿದರು. 

LEAVE A REPLY

Please enter your comment!
Please enter your name here