ಮಂಗಳೂರು: ರಾಮಕೃಷ್ಣ ಮಿಷನ್ ಮಂಗಳೂರು ವತಿಯಿಂದ ಸಂಸ್ಥೆಯ 75ನೇ ವರ್ಷದ ಅಂಗವಾಗಿ ವಿಶೇಷ ಭಕ್ತಿಸಂಗೀತಕಾರ್ಯಕ್ರಮ“ರಾಗ ಸಂಧ್ಯಾ” ವನ್ನುಏರ್ಪಡಿಸಲಾಗಿದೆ. ಈ ಸಂಗೀತ ಕಾರ್ಯಕ್ರಮವು ಏಪ್ರಿಲ್ 19, 2026, ಭಾನುವಾರ ಸಂಜೆ 5.00 ರಿಂದ 8.00 ಗಂಟೆಯವರೆಗೆಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ಮಂಗಳೂರು ಇಲ್ಲಿ ನಡೆಯಲಿದೆ.
ಖ್ಯಾತ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ತಬಲಾದಲ್ಲಿ ಮಾಯಾಂಕ್ ಬೇಡೇಕರ್, ಗೋವಾ ಹಾಗೂ ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್, ಉಡುಪಿ ಅವರು ಸಹಕರಿಸಲಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಉದ್ಘಾಟಿಸಲಿದ್ದಾರೆ.ಈ ಕಾರ್ಯಕ್ರಮವು ಭಕ್ತಿ ಮತ್ತು ಸಂಗೀತದ ಸಮನ್ವಯದಿಂದ ಶ್ರೋತೃಗಳಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುವ ಉದ್ದೇಶ ಹೊಂದಿದೆ.
ಭಕ್ತರು ಮತ್ತು ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಾಮಕೃಷ್ಣ ಮಿಷನ್ ಮಂಗಳೂರು ವಿನಂತಿಸಿದೆ.

