ರಾಷ್ಟ್ರ ಮಟ್ಟದ ಕಾವ್ಯೋತ್ಸವ -2026 ಕ್ಕೆ ಯುವ ಕವಿ ಬಿ ಎಂ ಕಿನ್ಯಾ ಆಯ್ಕೆ

0
23

ಪುತ್ತೂರು : ಕಪ್ಪತ್ತಗಿರಿ ಸಾಹಿತ್ಯ ಶಿಕ್ಷಣ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕ ಕಳಸಾಪೂರ -ಗದಗ ಜಿಲ್ಲೆ ಇದರ ವತಿಯಿಂದ ದಿನಾಂಕ : 21.06.2026 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆ ವಿಶ್ವ ಯೋಗ ದಿನಾಚರಣಿಯ ಪ್ರಯುಕ್ತ ನಡೆಯುವ ರಾಷ್ಟ್ರ ಮಟ್ಟದ ಕಾವ್ಯೋತ್ಸವ -2026 ಕವಿ ಗೋಷ್ಠಿಗೆ ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಅಬ್ದುಲ್ ಬಿ.ಎಂ ಕಿನ್ಯಾ ಆಯ್ಕೆಯಾಗಿರುತ್ತಾರೆ ಎಂದು ಕಪ್ಪತ್ತಗಿರಿ ಸಾಹಿತ್ಯ ಶಿಕ್ಷಣ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷರಾಗಿರುವ ಚಂದ್ರಕಲಾ ಮ ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಇವರು ಬ್ಯಾರಿ,ಕನ್ನಡ ಭಾಷೆಯಲ್ಲಿ ಕವನ ,ಲೇಖನ ,ಚುಟುಕು, ಬ್ಯಾರಿ ವಾರ್ತೆ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಬೆಳ್ಕಿರಿ , ಮೇಲ್ತೆನೆ ಇ ಮ್ಯಾಗಝಿನ್ , ಹಾಗೂ ಮೇಲ್ತೆನೆಲ್ ಬಿರಿಙೊ ಪೂವುಙ ಕವನ ಸಂಕಲನದಲ್ಲೂ ಪ್ರಕಟಗೊಂಡಿದ್ದು .

ಬ್ಯಾರಿ , ಕನ್ನಡ ಭಾಷೆಯಲ್ಲಿ ತಾಲೂಕು, ರಾಜ್ಯಮಟ್ಟ, ಹಾಗೂ ರಾಜ್ಯ ಮಟ್ಟದ ಪಂಚಭಾಷಾ ಕವಿಗೋಷ್ಟಿಯಲ್ಲೂ ಭಾಗವಹಿಸುತ್ತ ಮೇಲ್ತೆನೆ ಕಲಾವಿದಮ್ಮಾರೊ ಕೂಟ ದೇರಳಕಟ್ಟೆ ಇದರ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ . ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಮತ್ತು ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿರುವ ಡಾ. ಪಂಚಯ್ಯ ರಾ ಹಿರೇಮಠ್ ವಹಿಸಲಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here