ರಂಗಭೂಮಿಯಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾದ ‘ಜೈ ಹನುಮಾನ್’ : ಜೂನ್ 28ಕ್ಕೆ ‘ವಿಧಾತ್ರಿ ಸಂಭ್ರಮ’

0
18

ಮಂಗಳೂರು : ಕರಾವಳಿಯ ಸಾಂಸ್ಕೃತಿಕ ಲೋಕದಲ್ಲಿ ಕಳೆದೆರಡು ದಶಕಗಳ ಸಮೀಪದ ಇತಿಹಾಸ ಹೊಂದಿರುವ, ತುಳು ರಂಗಭೂಮಿಯ ಹೆಮ್ಮೆಯ ಸಂಸ್ಥೆ ‘ವಿಧಾತ್ರಿ ಕಲಾವಿದೆರ್ ಕುಡ್ಲ (ರಿ)’ ಈಗ 17ರ ಹರೆಯದ ಸಂಭ್ರಮದಲ್ಲಿದೆ. ತನ್ನ ವಿಶಿಷ್ಟ ರಂಗ ಪ್ರಯೋಗಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಈ ಸಂಸ್ಥೆಯು ಇದೀಗ ‘ವಿಧಾತ್ರಿ ಸಂಭ್ರಮ-2026’ ಕ್ಕೆ ಸಜ್ಜಾಗಿದೆ .

​ಜೂನ್ 28ರಂದು ಸಂಜೆ 4.30ಕ್ಕೆ ಮಂಗಳೂರಿನ ಸಾಂಸ್ಕೃತಿಕ ಕೇಂದ್ರ ಬಿಂದು ಪುರಭವನ (ಟೌನ್ ಹಾಲ್) ದಲ್ಲಿ ಹಬ್ಬ ಅನಾವರಣಗೊಳ್ಳಲಿದ್ದು, ರಂಗಾಸಕ್ತರಿಗೆ ದೃಶ್ಯ ವೈಭವದ ಹೂರಣ ಇರಲಿದೆ

​ಚಿತ್ರಮಂದಿರದ ಅನುಭವ ನೀಡಲಿರುವ ‘ಜೈ ಹನುಮಾನ್’ ಐತಿಹಾಸಿಕ, ಜಾನಪದ ಹಾಗೂ ಹಾಸ್ಯ ನಾಟಕಗಳ ಮೂಲಕ ಕರಾವಳಿ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಮುಂಬೈ ಮಹಾನಗರಗಳಲ್ಲೂ ಜನಮನ್ನಣೆ ಗಳಿಸಿರುವ ವಿಧಾತ್ರಿ ತಂಡ, ಈ ಬಾರಿ ತೀರಾ ಭಿನ್ನವಾದ ಪ್ರಯತ್ನಕ್ಕೆ ಕೈಹಾಕಿದೆ.

​ಸಾರಥ್ಯ & ನಿರ್ದೇಶನ:- ಚಿದಾನಂದ ಅದ್ಯಪಾಡಿ ಅವರ ಸಾರಥ್ಯದಲ್ಲಿ, ತುಳುನಾಡಿನ ಸಾಂಸ್ಕೃತಿಕ ಲೋಕದ ಧ್ರುವತಾರೆ ವಿಜಯಕುಮಾ‌ರ್ ಕೊಡಿಯಾಲ್ ಬೈಲ್ ಅವರ ಕಲಾತ್ಮಕ ನಿರ್ದೇಶನದಲ್ಲಿ ಈ ನಾಟಕ ಮೂಡಿಬಂದಿದೆ.

​ರಚನೆ:- ಭರತ್ ಎಸ್. ಕರ್ಕೇರ ಅವರು ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಈ ವಿಶಿಷ್ಟ ಕೃತಿಯನ್ನು ರಚಿಸಿದ್ದಾರೆ.

​ವಿಶೇಷತೆ:- ಭಾರಿ ವೆಚ್ಚದ ಅದ್ಧೂರಿ ರಂಗ ವಿನ್ಯಾಸ ಹಾಗೂ ಸಿನಿಮೀಯ ಮಾದರಿಯ ನಿರೂಪಣೆ (Cinematic Narration) ಈ ನಾಟಕದ ಪ್ರಮುಖ ಆಕರ್ಷಣೆಯಾಗಿದ್ದು, ಈಗಾಗಲೇ ಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ಗಳಿಸಿದೆ.

​ಸಾಧಕರಿಗೆ ‘ವಿಧಾತ್ರಿ ಸಂಭ್ರಮ-2026’ ಪ್ರಶಸ್ತಿ:-

​ನಾಟಕ ಪ್ರದರ್ಶನದ ಜೊತೆಗೆ ಕಲಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ‘ವಿಧಾತ್ರಿ ಸಂಭ್ರಮ-2026’ ಪ್ರಶಸ್ತಿ ಪ್ರದಾನ ಸಮಾರಂಭವೂ ಇದೇ ವೇದಿಕೆಯಲ್ಲಿ ನಡೆಯಲಿದೆ.

ಇಡೀ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಕಲಾಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಂಘಟಕ ಚಿದಾನಂದ ಅಡ್ಯಪಾಡಿ ಮನವಿ ಮಾಡಿದ್ದಾರೆ.

ಆಧುನಿಕತೆಯ ಅಬ್ಬರ, ಒಟಿಟಿ ಮತ್ತು ಮೊಬೈಲ್ ಸ್ಕ್ರೀನ್‌ಗಳ ಮಾಯಾಲೋಕದ ನಡುವೆಯೂ ರಂಗಭೂಮಿಯ ಜೀವಂತಿಕೆಯನ್ನು ಉಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇದು ಕೇವಲ ಮನರಂಜನೆಯಲ್ಲ, ಅದು ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೆದ್ದಾರಿ. ರಂಗದ ಮೇಲಿನ ಕಲಾವಿದನ ಬೆವರಿನ ಹನಿಗಳಿಗೆ ಪ್ರೇಕ್ಷಕನ ಚಪ್ಪಾಳೆಯೇ ನಿಜವಾದ ಸಂಭಾವನೆ. ‘ಜೈ ಹನುಮಾನ್’ ನಂತಹ ವಿನೂತನ ಪ್ರಯೋಗಗಳಿಗೆ ನಾವೆಲ್ಲರೂ ಸಾಕ್ಷಿಯಾಗುವ ಮೂಲಕ, ಕರಾವಳಿಯ ಕಲಾ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯೋಣ. ಭಾನುವಾರ ಸಂಜೆ ಪುರಭವನದಲ್ಲಿ ಭೇಟಿಯಾಗೋಣ, ಕಲೆಯ ಬೆಳಕಿನಲ್ಲಿ ಒಂದಾಗೋಣ!

ವರದಿ-ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here