ಮೂಡುಬಿದಿರೆ : ಯುವ ಲೇಖಕಿ ಸೌಮ್ಯ ತಿಲಕ್ ಶೆಟ್ಟಿ ಅವರ “ಮಸಿಯ ಮಾತು ಕವನ ಸಂಕಲನ” ಬಿಡುಗಡೆಯು ಜೂನ್ 26, 2026ರಂದು ಬೆಳಿಗ್ಗೆ 10.30ಕ್ಕೆ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಸ್ವಾಯತ್ತ ಪದವಿಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಕೃತಿ ಲೋಕಾರ್ಪಣೆಯನ್ನು ಡಾ. ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಅವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಡಾ. ಬಿ.ಪಿ. ಸಂಪತ್ ಕುಮಾರ್, ವಿಶ್ರಾಂತ ಕುಲಸಚಿವರು ಹಾಗೂ ಆಡಳಿತ ನಿರ್ದೇಶಕರು, ಎಕ್ಸಲೆಂಟ್ ಮೂಡುಬಿದಿರೆ ಭಾಗವಹಿಸಲಿದ್ದಾರೆ.
ಕೃತಿಯ ಪರಿಚಯವನ್ನು ವೇಣುಗೋಪಾಲ ಶೆಟ್ಟಿ ಕೆ., ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಮೂಡುಬಿದಿರೆ ತಾಲೂಕು ಘಟಕ ಮಾಡಿಕೊಡಲಿದ್ದು, ಆಶಾ ಅಡೂರ್, ಹವ್ಯಾಸಿ ಬರಹಗಾರ್ತಿ, ಉಜಿರೆ ಅವರು ಶುಭಾಶಂಸನೆ ಸಲ್ಲಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಜೈನ್, ಮ್ಯಾನೇಜಿಂಗ್ ಟ್ರಸ್ಟಿ, ಆಮಂತ್ರಣ ಸೇವಾ ಪ್ರತಿಷ್ಠಾನ (ರಿ.), ಅಳದಂಗಡಿ ಸೇರಿದಂತೆ ಹಲವು ಗಣ್ಯರು ಗೌರವ ಉಪಸ್ಥಿತರಾಗಿ ಶುಭ ಹಾರೈಸಲಿದ್ದಾರೆ. ವಿದ್ಯಾಗಿರಿ ಆಳ್ವಾಸ್ ಪಿಯು ಕಾಲೇಜಿನ ಕನ್ನಡ ವಿಭಾಗದ ಡಾ. ಸುಧಾರಾಣಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

