ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮಾಮೇಶ್ವರ ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0
159

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಮಾಮೇಶ್ವರ ಒಕ್ಕೂಟದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷರಾದ ಹರೀಶ್ ವಿ ಮಾಡ. ಅಧ್ಯಕ್ಷತೆಯಲ್ಲಿ ಜೂನ್ 21ನೇ ರವಿವಾರ ಬೊಳಂತಿಮೊಗೇರು ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಕಲ್ಲಡ್ಕ ವಲಯದ ಮೇಲ್ವಿಚಾರಕ ಶುಕರಾಜ್ ಯೋಜನೆಯ ಕಾರ್ಯಕ್ರಮಗಳು ಜೀವವಿಮೆ. ಸಂಪೂರ್ಣ ಸುರಕ್ಷಾ. ಪ್ರಸ್ತುತ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ನೂತನ ಅಧ್ಯಕ್ಷರಾಗಿ ಲಲಿತ ಅಡ್ಡಾಳಿ,ಉಪಾಧ್ಯಕ್ಷರಾಗಿ ಪುರಂದರ ಕೈಂತಿಲ, ಕಾರ್ಯದರ್ಶಿ ವನಿತಾ ಮಾಮೇಶ್ವರ,ಜೊತೆ ಕಾರ್ಯದರ್ಶಿ ಶಶಿಕಲಾ ಪಲ್ಲೇರಿ,ಕೋಶಾಧಿಕಾರಿಯಾಗಿ ರಾಜೇಶ್ ಕುಲಾಲ್, ಆಯ್ಕೆಯಾದರು.

ಒಕ್ಕೂಟದ ಸೇವಾ ಪ್ರತಿನಿಧಿ ಯಶೋಧ, ಪದಾಧಿಕಾರಿಗಳಾದ ಯಶೋದ ಮಾಮೇಶ್ವರ, ರಮೇಶ್ ಗೌಡ, ಪುರಂದರ, ಮೀನಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here