ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!

0
7

ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ನಿಕಟವಾದ ನಂಟು ಇರುವುದರಿಂದ ಇದೊಂದು ಹಿಂದೂಗಳ ಪಾಲಿಗೆ ಶ್ರದ್ದಾ ಕೇಂದ್ರವು ಆಗಿದೆ

ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯ, ಪುತ್ತೂರು ತಾಲೂಕ್ಕಿನ ಪುಟ್ಟ ಗ್ರಾಮ ಇರ್ದೆಯಲ್ಲಿ ಇದೊಂದು ಪ್ರಕೃತಿಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ. ಅಲ್ಲದೆ ಧಾರ್ಮಿಕವಾಗಿಯೂ ಈ ತೀರ್ಥ ಮಹತ್ವ ಪಡೆದಿದ್ದು ಸ್ಥಳೀಯವಾಗಿ ಸಾಕಷ್ಟು ಜನರಿಂದ ಮತ್ತು ಹೊಸದಾಗಿ ವಿವಾಹ ಆದವರು ಭೇಟಿ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿರುತ್ತದೆ.

ಆದಾಗ್ಯೂ ಈ ಬಿಸಿ ನೀರಿನ ಚಿಲುಮೆ ಅಥವಾ ತೀರ್ಥವು ದಕ್ಷಿಣ ಭಾರತದ ಒಂದು ವಿಸ್ಮಯವೆಂದೆ ಹೇಳಬಹುದು. ಇದರ ಕುರಿತು ಅಧ್ಯಯನ ನಡೆಸಿರುವ ಭಾರತೀಯ ಪುರಾತತ್ವ ಸಂಸ್ಥೆಯು ಇದನ್ನು ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂದು ಕರೆಯಲ್ಪಟ್ಟಿದೆ.

ಹಾಗೇನೇ ಪ್ರತೀ ವರ್ಷದ ತೀರ್ಥ ಅಮಾವಾಸ್ಯೆ ದಿನ ಅಂದರೆ ಈ ಬಾರಿ ಸೆಪ್ಟೆಂಬರ್ 11 ರ ಶುಕ್ರ ವಾರ ಪುಣ್ಯ ತೀರ್ಥ ಸ್ನಾನ ನಡೆಯಲಿದೆ.