ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ, ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿಯಲ್ಲಿ ಭಜನಾ ಆರಾಧ್ಯ ದೇವರಾದ ವಿಠೋಬಾ ರುಖುಮಾಯಿ ಶ್ರೀ ದೇವರ ಸನ್ನಿಧಿಯಲ್ಲಿ 126 ವರ್ಷದ ಭಜನಾ ಸಪ್ತಾಹದ 5 ದಿನ ಮಹಾ ರಂಗಪೂಜೆಯ ನಿಮಿತ್ತ ವಿಶೇಷ ಹೂವಿನ ಅಲಂಕಾರ , ಶ್ರೀದೇವರಿಗೆ ಶ್ರೀದೇವಿ ಭೂದೇವಿ ಸಹಿತ ಗರುಡಾರೂಢ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರ ವನ್ನು ದೇವಳದ ಪ್ರಧಾನ ಅರ್ಚಕರಾದ ದಯಾಘನ್ ಭಟ್ ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸಿದರು , ಊರ ಪರಊರ ಭಜನಾ ತಂಡಗಳಿಂದ ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ ವೈಭವದಿಂದ ನೆಡೆಯುತಿದ್ದು ಆಗಸ್ಟ್ 25 ರಂದು ಮಂಗಳಾಚರಣೆ ನೆಡೆಯಲಿದೆ .

