ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಭಾಗಿತ್ವದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಹಿರಿಯಡಕ ದೇವಾಡಿಗ ಸಭಾಭವನದಲ್ಲಿ ಆಯೋಜಿಸಲಾಗಿದ್ದ “ಕಣ್ಣಿನ ಉಚಿತ ತಪಾಸಣಾ ಶಿಬಿರ” ದಲ್ಲಿ 150 ಜನರಿಗೆ ಕನ್ನಡದ ಮಂಜೂರಾಗಿದ್ದು ಇದರ ವಿತರಣೆಯನ್ನು ದಿನಾಂಕ 05-11-2026 ರಂದು ಹಿರಿಯಡಕ ಶಾಸಕರ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿತರಿಸಿದರು.


ಈ ಸಂದರ್ಭದಲ್ಲಿ ಪ್ರಸಾದ್ ನೇತ್ರಾಲಯದ ಡಾll. ಕೃಷ್ಣಪ್ರಸಾದ್, ಪಕ್ಷದ ಮುಖಂಡರಾದ ಜೀಯಾನಂದ ಹೆಗಡೆ, ಪ್ರವೀಣ್ ಪೂಜಾರಿ ಹೀರೆಬೆಟ್ಟು, ಶೇಖರ್ ಶೆಟ್ಟಿ, ಬೊಮ್ಮರಬೆಟ್ಟು ಶಕ್ತಿ ಕೇಂದ್ರದ ಪ್ರಮುಖ್ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

