ಮಾಜಿ ಸಚಿವ, ಸಮಾಜ ಸೇವಾ ನಿರತ ಕೃಷ್ಣ ಜೆ ಪಾಲೇಮಾರ್ ರಿಗೆ ಕನ್ನಡ ಭವನದಿಂದ ಗೌರವಾರ್ಪಣೆ

0
9

ಮಂಗಳೂರು : ಮಂಗಳೂರಿನ ರಾಮಕ್ಷತ್ರಿಯ ಸಂಘ ಜೆಪ್ಪು ಇದರ ನೂತನ ಸಮಿತಿ ಪದಾಧಿಕಾರಿಗಳಿಗೆ 3.11.2026ರ ಸಂಜೆ 5ಗಂಟೆಗೆ ಜೆಪ್ಪು ರಾಮಕ್ಷತ್ರಿಯ ಸಂಘ ಸಭಾ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾಸರಗೋಡು ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಸಾರತ್ಯದ ಕನ್ನಡ ಭವನ ಗ್ರಂಥಾಲಯ ಮತ್ತು ಕನ್ನಡ ಭವನ ಪ್ರಕಾಶನ ಸಂಸ್ಥೆ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಿತು.ಮಾಜಿ ಸಚಿವ, ಶ್ರೀ ಕೃಷ್ಣ ಜೆ. ಪಾಲೇಮಾರ್ ಕಾರ್ಯಕ್ರಮ ಉದ್ಘಾಟಿಸಿ ನೂತನ ಅಧ್ಯಕ್ಷರಾದ ಶ್ರೀ ಯೋಗೀಶ್ ಕುಮಾರ್ ಜೆಪ್ಪು ಹಾಗೂ ಪದಾಧಿಕಾರಿಗಳಿಗೆ ಶಾಲು,, ಹಾರ ತೊಡಿಸಿ ಅಭಿನಂದಿಸಿದರು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಪ್ರಮಾಣ ಪತ್ರ ಸ್ಮರಣಿಕೆ ನೀಡಿದರು.

ಈ ವೇದಿಕೆಯಲ್ಲಿ ಮಾಜಿ ಸಚಿವ, ರಾಮಕ್ಷತ್ರಿಯ ಸಮಾಜದ ಹಿರಿಯ ಮುಂದಾಳು, ಸಮಾಜ ಸೇವಕ ಕೃಷ್ಣ ಜೆ. ಪಾಲೇಮಾರ್ ಇವರನ್ನು ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಪಾಲೇಮಾರ್ ಇವರಿಗೆ ಗೌರವಾರ್ಪಣೆ ನೀಡಿದರು.

ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆಯಾದ ರೇಖಾ ಸುದೇಶ್ ರಾವ್ ಕಾರ್ಯಧ್ಯಕ್ಷರಾದ ಉಮೇಶ್ ರಾವ್ ಕುಂಬ್ಳೆ ಸಹಕರಿಸಿದರು. ರಾಮಕ್ಷತ್ರಿಯ ಸಂಘ ಜೆಪ್ಪು ಮಂಗಳೂರು ಅಧ್ಯಕ್ಷ ಯೋಗೀಶ್ ಕುಮಾರ್ ಜೆಪ್ಪು ಅಭಿನಂದನಾ ಭಾಷಣ ಮಾಡಿದರು. ವಿಶ್ವ ರಾಮಕ್ಷತ್ರಿಯ ಪದಾಧಿಕಾರಿಗಳು ಹಾಗೂ ರಾಮಕ್ಷತ್ರಿಯ ಸಂಘ ಮಂಗಳೂರು ಕೋಶಾಧಿಕಾರಿ ಶ್ರೀ ನಾಗರಾಜ್ ಮದ್ದೋಡಿ ವಂದಿಸಿದರು.