ನ.5ರಂದು ಬೆಳಂದೂರು ಗ್ರಾಮ ಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮಸಭೆ

0
4

ಕಡಬ: ಬೆಳಂದೂರು ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ನವೆಂಬರ್ 5ರ ಗುರುವಾರ ಬೆಳಿಗ್ಗೆ 10.30ಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿದೆ.

ಸಭೆಯ ಚರ್ಚಾ ನಿಯಂತ್ರಣ ಅಧಿಕಾರಿಯಾಗಿ ಕುಕ್ಕೆ ಸುಬ್ರಹ್ಮಣ್ಯದ ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗದ ನಂ.3ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ನಾಡಗೀತೆ, ಸ್ವಾಗತ, ವರದಿ ಮಂಡನೆ ಹಾಗೂ ಅನುಮೋದನೆ, ವಾರ್ಡ್ ಸಭೆಗಳ ನಿರ್ಣಯಗಳ ಅನುಮೋದನೆ, ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ, ಗ್ರಾಮಾಭಿವೃದ್ಧಿ ಕುರಿತ ಚರ್ಚೆ, ಸಾರ್ವಜನಿಕರ ಸಲಹೆ-ಸೂಚನೆಗಳು ಹಾಗೂ ವಿವಿಧ ಸರಕಾರಿ ಯೋಜನೆಗಳಿಗೆ ಅರ್ಜಿ ಸ್ವೀಕಾರ ಸೇರಿದಂತೆ ಹಲವು ವಿಷಯಗಳು ಕಾರ್ಯಸೂಚಿಯಲ್ಲಿವೆ. ವಸತಿ ಯೋಜನೆಯ ಫಲಾನುಭವಿಗಳಿಂದಲೂ ಅರ್ಜಿಗಳನ್ನು ಸ್ವೀಕರಿಸಲಾಗುವುದು.

ಗ್ರಾಮ ಪಂಚಾಯತ್‌ಗೆ ಪಾವತಿಸಬೇಕಾದ ಬಾಕಿ ಕಟ್ಟಡ ತೆರಿಗೆ, ವ್ಯಾಪಾರ ಪರವಾನಿಗೆ ಶುಲ್ಕ, ಕಟ್ಟಡ ಬಾಡಿಗೆ ಹಾಗೂ ನೀರಿನ ತೆರಿಗೆಗಳನ್ನು ಕೂಡಲೇ ಪಾವತಿಸುವಂತೆ ಪಂಚಾಯತ್ ವತಿಯಿಂದ ಮನವಿ ಮಾಡಲಾಗಿದೆ.

ಅಲ್ಲದೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬವೂ ಶೌಚಾಲಯವನ್ನು ಕಡ್ಡಾಯವಾಗಿ ಬಳಸಬೇಕು ಹಾಗೂ ಮನೆ ಮತ್ತು ಅಂಗಡಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ ಹಾಕುವುದು ಹಾಗೂ ದ್ರವತ್ಯಾಜ್ಯ ಹರಿಬಿಡುವುದನ್ನು ನಿಷೇಧಿಸಲಾಗಿದೆ ಎಂದು ಪಂಚಾಯತ್ ತಿಳಿಸಿದೆ.

ಗ್ರಾಮದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆ-ಸೂಚನೆಗಳನ್ನು ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಶೆಟ್ಟಿ, ಆಡಳಿತಾಧಿಕಾರಿ ಹರೀಶ್ ಕೆ. ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.