ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಅಗತ್ಯತೆ, ಅದರ ಉದ್ದೇಶ ಹಾಗೂ ವಿದ್ಯಾರ್ಥಿವೇತನವನ್ನು ಯಾವ ರೀತಿ ಪಡೆಯಬಹುದು. ವಿದ್ಯಾರ್ಥಿವೇತನವನ್ನು ಪಡೆಯಬೇಕಾದರೆ ಸರಿಯಾದ ದಾಖಲೆಗಳನ್ನು ಖಾತರಿ ಪಡೆಸಿಕೊಳ್ಳುವುದು ಮತ್ತು ವಿದ್ಯಾರ್ಥಿವೇತನ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಾಲೇಜಿನ ಹಳೆ ವಿದ್ಯಾರ್ಥಿಯಾದ ಶ್ರೀ ಚಂದ್ರಶೇಖರ್ ಎಸ್. ಎಡಪದವು ಸೀನಿಯರ್ ಇಂಜಿನಿಯರ್ ಕೆಮಿಕಲ್ ಫರ್ಟಿಲೈಸರ್ಸ್ ಇವರು ತಿಳಿಸಿದರು. ಇವರು ಮಾತನಾಡುತ್ತಾ ಸುಮಾರು 50 ಬಗೆಯ ವಿದ್ಯಾರ್ಥಿವೇತನ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು. ಆರ್ಥಿಕವಾಗಿ ಹಿಂದುಳಿದ ಮತ್ತು ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷೀ ಉಪಸ್ಥಿತರಿದ್ದರು. ಗಣಕ ವಿಭಾಗದ ಉಪನ್ಯಾಸಕಿ ಕು. ಅರುಣ ಕಾರ್ಯಕ್ರಮವನ್ನು ನಿರೂಪಿಸಿದರು.
Home Uncategorized ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು, ಮೂಡುಬಿದಿರೆ :ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಾಹಿತಿ...