ಕಟಪಾಡಿ : ಶ್ರೀ ಕ್ಷೇತ್ರದ ಶಂಕರಪುರ ಮತ್ತು ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್ ವತಿಯಿಂದ ಪ್ರತಿವರ್ಷ ಶಾಲಾ ಮಕ್ಕಳಿಗೆ ವಿತರಿಸುವ ಪಾಯಸ ಸೇವೆಯನ್ನು 2025 ಜುಲೈ 3 ರ ಗುರುವಾರದಂದು ಶ್ರೀ ಅಣ್ಣಯ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರೂಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಠದ ಟ್ರಸ್ಟಿ ಗೀತಾಂಜಲಿ ಎಂ ಸುವರ್ಣ, ಟ್ರಸ್ಟಿ ಸತೀಶ್ ದೇವಾಡಿಗ ಶಾಲೆಯ ಸಂಚಾಲಕರಾದ ಪ್ರವೀಣ್ ಕುಮಾರ್ ಗುರ್ಮೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಕಿಶನ್ ಶೆಟ್ಟಿ, ಮುಖ್ಯ ಶಿಕ್ಷಕಿ ಶಾಂಭವಿ ಡಿ ಆಚಾರ್ಯ ಶಿಕ್ಷಕಿಯಾರಾದ ಶಕೀಲ, ಸೌಮ್ಯ, ಸುಮಂಗಳ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಉಪಸ್ಥಿತರಿದ್ದರು.