ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಸೃಷ್ಟಿ ಪಿ. ಹೊಳ್ಳ ಅವರಿಗೆ ಅತ್ಯುನ್ನತ ಶ್ರೇಣಿ

0
13

ಬಂದಾರು : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು 2026ರ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೆರ್ಲ-ಬೈಪಾಡಿಯ ನಿವಾಸಿ ಸೃಷ್ಟಿ ಪಿ. ಹೊಳ್ಳ ಅವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಸೃಷ್ಟಿ ಅವರು ಭರತನಾಟ್ಯ ತರಬೇತಿಯನ್ನು ವಿದುಷಿ ಅಮೃತ ಆಚಾರ್ಯ ಕೊಯ್ಯೂರು ಹಾಗೂ ವಿದುಷಿ ಶಾಲಿನಿ ಆತ್ಮಭೂಷಣ್ ಪುತ್ತೂರು ಅವರಿಂದ ಪಡೆದಿದ್ದಾರೆ.

ಇವರು ಬಂದಾರು ಗ್ರಾಮದ ಪೆರ್ಲ-ಬೈಪಾಡಿಯ ಶ್ರೀ ದುರ್ಗಾನುಗ್ರಹ ನಿಲಯ ನಿವಾಸಿ, ದೇವಸ್ಥಾನದ ಅರ್ಚಕರಾದ ಪ್ರಶಾಂತ್ ಹೊಳ್ಳ ಹಾಗೂ ಮೇಘನಾ ಪ್ರಶಾಂತ್ ಹೊಳ್ಳ ದಂಪತಿಯ ಪುತ್ರಿ. ಪ್ರಸ್ತುತ ಉಜಿರೆಯ ಎಸ್.ಡಿ.ಎಂ. (ಸಿಬಿಎಸ್‌ಇ) ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಕಲೆಯ ಮೇಲಿನ ಆಸಕ್ತಿ ಮತ್ತು ನಿರಂತರ ಅಭ್ಯಾಸದಿಂದ ಈ ಸಾಧನೆ ಮಾಡಿರುವ ಸೃಷ್ಟಿ ಅವರಿಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.