ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ವೈದ್ಯಕೀಯ ರಸ ಪ್ರಶ್ನೆ ಸ್ಪರ್ಧಾ ಕೂಟ
ಕೆ.ಎಮ್.ಸಿ. ಮಣಿಪಾಲ್ ಕಾಲೇಜ್ ತಂಡಕ್ಕೆ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ – 2025 ಪ್ರಶಸ್ತಿ

0
81

ಮಂಗಳೂರು : ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಸ್ತ್ರ ಶಿಕ್ಷಣ ವಿಧ್ಯಾರ್ಥಿಗಳಿಗಾಗಿ 4ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ – 2025
ತಾ: 17.05.2025 ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು.

ಈ ಸ್ಪರ್ಧಾ ಕೂಟದಲ್ಲಿ ಕೆ.ಎಮ್.ಸಿ. ಮಣಿಪಾಲ್ ತಂಡವನ್ನು ಪ್ರತಿನಿಧಿಸಿದ ಡಾ. ಅದಿಥಿ ರಾವ್ ಮತ್ತು ಡಾ. ಸಾಯಿ ಭವಾನಿ ರೆಡ್ಡಿ ತಂಡವು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು. ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಡಾ. ವಿನಾಯಕ್ ಎಸ್.ಕೆ. ಮತ್ತು ಡಾ. ರಾಘವೇಂದ್ರ ಡಿ. ತಂಡವು ದ್ವಿತೀಯ ಸ್ಥಾನ, ತೃತೀಯ ಸ್ಥಾನವನ್ನು ನಗರದ ಏ.ಜೆ. ವ್ಯದ್ಯಕೀಯ ಕಾಲೇಜಿನ ಡಾ. ವರುಣ್ ಶೆಟ್ಟಿ ಮತ್ತು ಡಾ. ಅಭಿನ್ ರೈ ಗಳಿಸಿತು. ಇದು ಒಂದು ಕುತೂಹಲಕಾರಿ ಮತ್ತು ರೋಮಾಂಚಕಾರಿ ಸ್ಪರ್ಧೆಯಾಗಿತ್ತು.

ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಡಾ. ಮೊಹಮ್ಮದ್ ಇಸ್ಮಯಿಲ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು “ವೈದ್ಯಕೀಯ ಶಿಕ್ಷಣ ವಿಧ್ಯಾರ್ಥಿಗಳು ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಶೈಕ್ಷಣಿಕ ಜ್ಞಾನವನ್ನು ವ್ರದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು” ಎಂದು ಸಲಹೆ ನೀಡಿ ಸ್ಪರ್ಧಾ ವಿಜೇತರ ಸಾಧನೆಯನ್ನು ಪ್ರಶಂಸಿಸಿ ಪ್ರಶಸ್ತಿ, ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರಧಾನ ಮಾಡಿ ಅಭಿನಂದಿಸಿದರು.

ವೇದಿಕೆಯಲ್ಲಿ ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಶಹನವಾಜ್ ಮಣಿಪಾಡಿ ಮತ್ತು ಕಣಚೂರು ವೈದ್ಯಕೀಯ ಕಾಲೇಜಿನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಹರೀಶ್ ಶೆಟ್ಟಿ ಮತ್ತು ಸಲಹಾ ಸಮಿತಿಯ ಸದಸ್ಯ ಪ್ರೊ. ಡಾ. ಎಂ.ವಿ. ಪ್ರಭು ಉಪಸ್ಥಿತರಿದ್ದರು. ವೈದ್ಯಕೀಯ ಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ. ಡಾ. ದೇವದಾಸ್ ರೈರವರು ಸ್ಪರ್ಧಾಕೂಟವನ್ನು ನಿರೂಪಿಸಿದ್ದರು.

ಅವಿಭಾಜಿತ ದ.ಕ. ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 28 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.

ಪ್ರೊ. ಡಾ. ದೇವದಾಸ್ ರೈ ಸ್ವಾಗತಿಸಿ ಸ್ಪರ್ಧಾಕೂಟದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಮೊಹಮ್ಮದ್ ಶಹಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಂ.ವಿ. ಮಲ್ಯರವರು ಬಹುಮಾನಗಳನ್ನು ಪ್ರಯೋಜಿಸಿದರು.

LEAVE A REPLY

Please enter your comment!
Please enter your name here