Tuesday, April 22, 2025
Homeಕಾಸರಗೋಡುಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ 128 ಕವಿಗಳಿಗೆ...

ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ 128 ಕವಿಗಳಿಗೆ ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಚುಟುಕು ಕಾವ್ಯ ಪ್ರಶಸ್ತಿ ಪ್ರದಾನ

ಕನ್ನಡ ಗ್ರಾಮದಲ್ಲಿ ನಡೆದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಹಾಗೂ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ 128 ಕವಿಗಳಿಗೆ ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್ ಚುಟುಕು ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯನ್ನು ಹಿರಿಯ ಕವಿ,ಲೇಖಕ,ವಿಶ್ರಾಂತ ಪ್ರಾಂಶುಪಾಲ ಪ್ರೊ.ಪಿ. ಎನ್ ಮೂಡಿತ್ತಾಯ ಮಂಜೇಶ್ವರ ಉದ್ಘಾಟಿಸಿದರು.
ಚುಟುಕು ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ ಮತ್ತು ಈ ಪ್ರಕಾರವು ಹಿರಿದಾದ ಕಥೆ, ಕಾದಂಬರಿಯನ್ನು ಸಹ ಪ್ರತಿನಿಧಿಸುವ ತಾಕತ್ತು ಹೊಂದಿದೆ ಸಮಯದ ಕೊರತೆ ಹೆಚ್ಚಾದ ಚಟುವಟಿಕೆ ತುಂಬಿದ ಜನ ಜೀವನದಲ್ಲಿ ಕಡಿಮೆ ಪದಗಳ ಹೆಚ್ಚು ಅರ್ಥವತ್ತಾದ ಸಾಹಿತ್ಯಗಳು ಜನಪ್ರೀತಿಗಳಿಸುವಲ್ಲಿ ಸೋಲಲಾರವು ಎಂದು ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಕಣಚೂರು ಹಾಗೂ ಮಂಗಳ ಆಸ್ಪತ್ರೆಗಳ ಹಿರಿಯ ವೈದ್ಯ ಹಾಗೂ ಬರಹಗಾರ ಕವಿ ಡಾ.ಸುರೇಶ ನೆಗಳಗುಳಿ ಹೇಳಿದರು.
ಮೈಸೂರು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಸಮ್ಮೇಳನಾಧ್ಯಕ್ಷ ಹರೀಶ ಸುಲಾಯ, ಒಡ್ಡoಬೆಟ್ಟು, ವಿಶ್ರಾಂತ ಪ್ರಾಧ್ಯಾಪಕ ಕವಿ,ಸಾಹಿತಿ, ಗುಣಾಜೆ ರಾಮಚಂದ್ರ ಭಟ್ ದೇರಳಕಟ್ಟೆ, ಕಾಸರಗೋಡು
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು, ಕವಯತ್ರಿ, ಸಾಹಿತಿ, ಸಂಘಟಕಿ ಶೋಭಾ ಬನಶಂಕರಿ ಬೆಳಗಾವಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್. ಎಸ್.ಶಾಸ್ತ್ರಿ, ವಿ. ಕೆ. ಎಂ. ಕಲಾವಿದರು (ರಿ ), ಬೆಂಗಳೂರು ಪ್ರದಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಚುಟುಕು ಕಾವ್ಯ ಪ್ರಶಸ್ತಿ, ಪ್ರಶಸ್ತಿ ಪತ್ರ ಶಾಲು, ಸ್ಮರಣೆಕೆ, ಸಾಹಿತ್ಯ,ಪುಸ್ತಕದ ಕಿಟ್ ಮತ್ತು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು.
ಕೇರಳ ಮತ್ತು ಕರ್ನಾಟಕ ರಾಜ್ಯದಿಂದ ಕವಿ,ಸಾಹಿತಿ, ಬರಹಗಾರರು, ಮಾಧ್ಯಮದವರು, ಕಲಾವಿದರು ಭಾಗವಹಿಸಿದ್ದು ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ರಾಜ್ಯಮಟ್ಟದ ಅಂಚೆ ಕಾರ್ಡ್ ಚುಟುಕು ಸ್ಪರ್ಧೆ, ಅಂಚೆ ಕಾರ್ಡ್ ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ತೀರ್ಪುಗಾರರಿಂದ ವಿವಿಧ ವಿಭಾಗದಲ್ಲಿ ಆಯ್ಕೆಯಾದ 128 ಚುಟುಕು ಕವಿಗಳು ಚುಟುಕು ವಾಚನಗೈದರು. ವಿಂದ್ಯಾ ಎಸ್. ರೈ, ಕಡೇಶಿವಾಲಯ, ಪ್ರೇಮಾ, ವನಜಾಕ್ಷಿ, ಚೆoಬ್ರಕಾನ, ಶ್ವೇತಾ ರಮೇಶ ಬೆಳ್ಳಿಪಾಡಿ,ಅಕ್ಷತಾ ನಾಗನಕಜೆ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES
- Advertisment -
Google search engine

Most Popular