ಅಪಪ್ರಚಾರ-ಅವಮಾನದ ಧೋರಣೆ ನಿಲ್ಲಿಸಿ: ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಖಂಡನೆ

0
89

ಮಂಗಳೂರು: ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆ ನೀಡುತ್ತಲೇ ಜಗತ್ತಿಗೇ ಪರಿಚಯಿಸಿದ ಕ್ಷೇತ್ರ ಧರ್ಮಸ್ಥಳ. ಈ ಎಲ್ಲಾ ಹಿನ್ನೆಲೆಯಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕೆಲವು ಸ್ಥಾಪಿತ ಹಿತಾಸಕ್ತಿಯ ವಿರೋಧಿಗಳು ಷಡ್ಯಂತ್ರ ರೂಪಿಸಿ ಹಲವು ವರ್ಷಗಳಿಂದ ನಿರಂತರ ಅಪಪ್ರಚಾರ ಮತ್ತು ಅವಮಾನ ಮಾಡುತ್ತಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ, ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿರುವುದು ಖೇದಕರ. ಇವರ ಈ ಧೋರಣೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು ೮೦೦ ವರ್ಷಗಳ ಪ್ರಾಚೀನ ಇತಿಹಾಸವಿರುವ ಪುಣ್ಯ ಕ್ಷೇತ್ರ ನಮ್ಮ ಧರ್ಮಸ್ಥಳ. ಪರಂಪರೆಯಿಂದ ಬಂದ ಚತುರ್ವಿದ ದಾನ’ಗಳು ಮತ್ತು ನಾಡು ನುಡಿ ಸಾಹಿತ್ಯ ಕಲೆ ಸಂಸ್ಕೃತಿಗಳ ಪೋಷಣೆ ಮತ್ತು ಸಂರಕ್ಷಣೆಗೆ ಹಾಗೂ ಸಾಮಾಜಿಕ ಅಭಿವೃದ್ಧಿ ಮತ್ತು ಪರಿಸರ ಸಂರ‍ಕ್ಷಣೆಗೆ ಶ್ರೀ ಕ್ಷೇತ್ರವು ಕೊಡುತ್ತಿರುವ ಕೊಡುಗೆ ಮೌಲಿಕವಾದುದು. ಆರೋಗ್ಯ, ವಿದ್ಯೆ ಮತ್ತು ಉದ್ಯೋಗ ವಲಯದಲ್ಲೂ ಜನಪರ ಕಾಳಜಿಯಿಂದ ಉನ್ನತ ಸಾಧನೆ ಮಾಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ, ಸಮಾಜಮುಖೀ ಅಭಿವೃದ್ಧಿ ಯೋಜನೆಗಳಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.

ವಿದ್ಯಾದಾನಕ್ಕೆ ಸಂಬಂಧಿಸಿದಂತೆ ಡಿ. ವೀರೇಂದ್ರ ಹೆಗ್ಗಡೆಯವರ ಸಮರ್ಥ ನಾಯಕತ್ವದಲ್ಲಿ ಪ್ರಸ್ತುತ ಎಲ್‌ಕೆಜಿಯಿಂದ ಪಿಜಿಯವರೆಗೆ ವಿವಿಧ ವಿಷಯಗಳ ೫೬ ಶಿಕ್ಷಣ ಸಂಸ್ಥೆಗಳು Adding Value in to Education ಎಂಬ ಉತ್ಕೃಷ್ಟ ಧ್ಯೇಯದೊಂದಿಗೆ ಉಜಿರೆ, ಮಂಗಳೂರು, ಉಡುಪಿ, ಸಂಸೆ, ಹಾಸನ, ಬೆಂಗಳೂರು, ಮೈಸೂರು ಮತ್ತು ಧಾರವಾಡಗಳಲ್ಲಿ ಪ್ರಾಥಮಿಕ, ಪ್ರೌಢ, ಪಿಯುಸಿ ಮತ್ತು ಪದವಿ, ಐಟಿಐ, ಡಿಪ್ಲೊಮಾ, ಕಾನೂನು, ವೈದ್ಯಕೀಯ, ದಂತವೈದ್ಯಕೀಯ, ಇಂಜಿನಿಯರಿಂಗ್, ಎಂಬಿಎ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಆಯುರ್ವೇದ ಮೊದಲಾದ ಕೋರ್ಸ್‌ ಗಳ ಮೂಲಕ ಗುಣ ಮಟ್ಟದ ಶಿಕ್ಷಣ ನೀಡುತ್ತಿವೆ. ೨೦೧೯ರಲ್ಲಿ ಧಾರವಾಡದಲ್ಲಿ ಎಸ್‌ಡಿಎಂ ಯುನಿರ್ವಸಿ ಆರಂಭವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ದೇಶದ ಅಗ್ರ ಉದಯೋನ್ಮುಖ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಉನ್ನತ ಶಿಕ್ಷಣದ ಕೆಲವು ಸಂಸ್ಥೆಗಳು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ (ನ್ಯಾಕ್)ಯಿಂದ ಉನ್ನತ ಗ್ರೇಡಿಂಗ್‌ಗಳನ್ನು ಪಡೆದಿವೆ. ಪ್ರಸ್ತುತ ಎಲ್ಲ ಎಸ್‌ಡಿಎಂ ವಿದ್ಯಾಸಂಸ್ಥೆಗಳಲ್ಲಿ ಸುಮಾರು ೩೦ ಸಾವಿರ ವಿದ್ಯರ‍್ಥಿಗಳು ವ್ಯಾಸಂಗ ಮಾಡುಡುತ್ತಿದ್ದು, ಸುಮಾರು ೮ ಸಾವಿರ ಉದ್ಯೋಗಿಗಳು ಸೇವೆಯಲ್ಲಿ ನಿರತರಾಗಿದ್ದಾರೆ.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಬಹುಸಂಖ್ಯೆಯ ಮಹಿಳಾ ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯರ‍್ಥಿನಿಯರೂ ಇದ್ದು ನಮಗೆ ಯಾರಿಗೂ ಕ್ಷೇತ್ರದಿಂದಾಗಲೀ, ಕ್ಷೇತ್ರದ ಆಡಳಿತ ರ‍್ಗದಿಂದಾಗಲೀ ಯಾವುದೇ ರೀತಿಯ ತೊಂದರೆ ಆಗಿಲ್ಲ. ನಮ್ಮೆಲ್ಲರ ಶ್ರೇಯೋಭಿವೃದ್ಧಿಯನ್ನೇ ಬಯಸುವ ಪೂಜ್ಯ ಹೆಗ್ಗಡೆಯವರ ಮತ್ತು ಅವರ ಕುಟುಂಬರ‍್ಗದವರ ಬಗ್ಗೆ ಅವಮಾನಕರ ಮಾತುಗಳನ್ನಾಡುವವರ ಅನಪೇಕ್ಷಿತ ಚಟುವಟಿಕೆಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಜಾತಿ ಮತ ದೇಶ ಭಾಷೆಗಳ ತಾರತಮ್ಯವಿಲ್ಲದೆ ರ‍್ವರನ್ನೂ ಸಮಾನ ಪ್ರೀತಿಯಿಂದ ಕಾಣುವ ಮಾನವತಾವಾದಿ, ನಮ್ಮ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ಆರೋಪಗಳನ್ನು ನಾವು ಖಡಾ ಖಂಡಿತವಾಗಿ ತಿರಸ್ಕರಿಸುತ್ತೇವೆ ಎಂದು ಕಾರ್ಯದರ್ಶಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, (ಐಟಿ ಮತ್ತು ಹಾಸ್ಟೇಲ್)‌ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಉಜಿರೆ ಹಾಗೂ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು, ಎಸ್ ಡಿ ಎಮ್ ಶಾಲಾ ಕಾಲೇಜುಗಳು ಉಜಿರೆ ಇವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here