“ಧರ್ಮಸ್ಥಳ ಧರ್ಮಾಧಿಕಾರಿಗಳ ಜನಮಂಗಳ ಯೋಜನೆಯಡಿಯಲ್ಲಿ ಸಂಜೀವ ಮೂಲ್ಯರಿಗೆ ವೀಲ್‌ಚೇರ್ ಹಸ್ತಾಂತರ ಕಾರ್ಯಕ್ರಮ”

0
150

ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಯವರ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಗರ್ಡಡಿ ವಲಯದ ಪಡಂಗಡಿ ಕಾರ್ಯಕ್ಷೇತ್ರದ ಮಂಜುಶ್ರೀ ಸ್ವಸಹಾಯ ಸಂಘ ದ ಸದಸ್ಯರಾದ ಸಂಜೀವ ಮೂಲ್ಯ ರವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ಮಂಜೂರಾದ ವೀಲ್ ಚಯರ್ ನ್ನು ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ ಪೂಜಾರಿ, ಪಡಂಗಡಿ ಒಕ್ಕೂಟ ಅಧ್ಯಕ್ಷರಾದ ಸುರೇಶ್ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಜೈನ್ ಸಂಜೀವ ಮೂಲ್ಯ ರವರ ಪತ್ನಿ ಭಾರತೀಯವರಿಗೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರಿಚರ್ಡ್ ಗೋವಿ ಯಸ್ , ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಡಂಗಡಿ ಇದರ ನಿರ್ದೇಶಕರಾದ ನಾರಾಯಣ ಮೂಲ್ಯ ಪ್ರಗತಿಪರ ಕೃಷಿಕರಾದ ಚಂದ್ರಕಾಂತ ಜೈನ್, ಹೇಮಂತ್ ಜೈನ್ ವಲಯ ಮೇಲ್ವಿಚಾರಕರಾದ ಶ್ರೀಮತಿ ಹೇಮಾವತಿ, ಸೇವಾ ಪ್ರತಿನಿಧಿ ಶ್ರೀಮತಿ ರೇಷ್ಮಾ, ಹಾಗೂ ಮಂಜುಶ್ರೀ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here