ಕಾರ್ಕಳ ತಾಲೂಕಿನ ಪಳ್ಳಿ ನಿಂಜೂರು,ಕಣಂಜಾರು ಮತ್ತು ರಂಗನಪಲ್ಕೆ ಭಾಗದಲ್ಲಿ ವಾಸಿಸುತ್ತಿರುವ ಆದಿ ದ್ರಾವಿಡ ಸಮುದಾಯದವರು ವಾಸಿಸುತ್ತಿರುವ ಈ ಭಾಗದಲ್ಲಿಸರಿಯಾದ ರಸ್ತೆ ಸಂಪರ್ಕ ಇಲ್ಲ: ಸುಧಾಕರ್ ದಾನಶಾಲೆ ಆಕ್ರೋಶ

0
30

ಕಾರ್ಕಳ : ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಸಮುದಾಯದವರು ವಾಸಿಸುತ್ತಿರುವ ನಿಂಜೂರು, ರಂಗನಪಲ್ಕೆ ಮತ್ತು ಕಣಂಜಾರು ಈ ಭಾಗದಲ್ಲಿ ಸರಿಯಾದ ಡಾಮರೀಕರಣ ನಡೆಯದೇ ಅದೆಷ್ಟೋ ವರ್ಷಗಳಾಗಿವೆ.ಯಾವ ಆಟೋ ಡ್ರೈವರ್ ಗಳು ಕೂಡ ತಮ್ಮ ಗಾಡಿ ಚಲಾಯಿಸಿಕೊಂಡು ಬರಲು ಹಿಂಜರಿಯುತ್ತಾರೆ.

ದಿನನಿತ್ಯ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಕಾರ್ಮಿಕರು, ಜನಸಾಮಾನ್ಯರು, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದಾರೆ.ದಯವಿಟ್ಟು ಈ ರಸ್ತೆಯನ್ನು ದುರಸ್ಥಿ ಗೊಳಿಸಬೇಕು.

ದುರಸ್ಥಿಗೊಳಿಸದಿದ್ದರೆ ಅತೀ ಶೀಘ್ರದಲ್ಲೇ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಭೀಮ್ ಸೇನೆ (ರಿ.) ಇದರ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಸುಧಾಕರ್ ದಾನಶಾಲೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here