ಹೆಜಮಾಡಿ : ಪಲಿಮಾರು ಮೊಗವೀರ ಮಹಾಸಭಾ ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಸುಧಾಕರ್ ಎಸ್. ಕರ್ಕೇರ ಅವರು ನೇಮಕಗೊಂಡಿದ್ದಾರೆ.
ಅವರ ಆಯ್ಕೆಗೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದು, ಅವರ ನಾಯಕತ್ವದಲ್ಲಿ ಮಹಾಸಭೆಯು ಇನ್ನಷ್ಟು ಸಂಘಟಿತವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಸಮುದಾಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

