ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ – ಸಮಿತಿಯ ಅಧ್ಯಕ್ಷರಾಗಿ ಶಿವಪುರ ಸುರೇಶ ಶೆಟ್ಟಿ

0
42

ಸೂರಿಮಣ್ಣು ಶಿವಪುರ : ಹೆಬ್ರಿ ತಾಲ್ಲೂಕಿನ ಶಿವಪುರ ಸೂರಿಮಣ್ಣು ಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿಯ ವತಿಯಿಂದ ನಡೆಯುವ ಭಜನಾ ಸುವರ್ಣ ಸಂಭ್ರಮ ಮತ್ತು ಋಕ್‌ ಸಂಹಿತಾಯಾಗವು ಜನವರಿ ೩೦ ಫೆಬ್ರವರಿ ೦೬ ರ ತನಕ ನಡೆಯಲಿದೆ.

ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷರನ್ನಾಗಿ ಮುಖಂಡ ಶಿವಪುರ ಸುರೇಶ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಧರ ಶೆಟ್ಟಿ ಪಡ್ಜಾಲ್‌ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸೂರಿಮಣ್ಣ ಭಜನೆಯ ರೂವಾರಿ ಸದಾಶಿವ ಉಪಾಧ್ಯಾಯ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಪುತ್ತಿ, ಜೊತೆ ಕಾರ್ಯದರ್ಶಿಯಾಗಿ ಸುಭಾಶ್ಚಂದ್ರ ನಾಯ್ಕ್‌, ಕೋಶಾಧಿಕಾರಿಯಾಗಿ ಪ್ರಸನ್ನ ಶೆಟ್ಟಿ, ಉಪಾಧ್ಯಕ್ಷರಾಗಿ ರಮೇಶ ಕುಮಾರ್‌ ಶಿವಪುರ, ರಮೇಶ ಶೆಟ್ಟಿ ಪಡ್ಜಾಲ್‌, ಶೇಖರ ಕುಲಾಲ್‌ ಸೂರಿಮಣ್ಣು, ದಿನೇಶ ಶೆಟ್ಟಿ ಸೂರಿಮಣ್ಣು, ಭೋಜ ಕುಲಾಲ್‌ ಸೂರಿಮಣ್ಣು, ಗೋಪಾಲ ಕುಲಾಲ್‌ ಸೂರಿಮಣ್ಣು, ವಿಠ್ಠಲ ಶೆಟ್ಟಿ ಸೂರಿಮಣ್ಣು, ಹಲವು ಮಂದಿ ಗೌರವ ಸಲಹೆಗಾರರು, ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಚೇತನ್‌ ಕುಲಾಲ್‌ ಸೂರಿಮಣ್ಣು ಯುವ ಘಟಕ ಮತ್ತು ಅಕ್ಷತಾ ಶೆಟ್ಟಿ ಒಂಬತೋಕ್ಲು ಮಹಿಳಾ ಘಟಕದ ಅಧ್ಯಕ್ಷರಾಗಿದ್ದಾರೆ. ಹಲವಾರು ಮಂದಿಯನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here