ಎಸ್ ವಿ ಎಸ್ ಪಿಯು ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಸಮಾರೋಪ

0
144

ಬಂಟ್ವಾಳ: ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವಕಾಲೇಜಿನರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಮಂಚಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕಿನ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಶ್ರೀ ವೆಂಕಟರಮಣಸ್ವಾಮೀ ಪದವಿ ಪೂರ್ವಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಪೂರ್ಣೇಶ್ವರಿಭಟ್, ಶ್ರೀ ವೆಂಕಟರಮಣಸ್ವಾಮೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಹರಿಪ್ರಸಾದ್, ಶ್ರೀ ವೆಂಕಟರಮಣಸ್ವಾಮೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಚೈತ್ರಾ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯಘಟಕ ನಾಯಕ ದೀಕ್ಷಿತ್ ಮತ್ತುಘಟಕ ನಾಯಕಿ ಪ್ರತೀಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಶಿಬಿರಾಧಿಕಾರಿ ಮಾಯಿಲ.ಕೆ ಹಾಗೂ ಉಪನ್ಯಾಸಕರು ಸಹಕರಿಸಿದರು.
ಶಿಬಿರಾರ್ಥಿಗಳಾದ ಆದಿತ್ಯ ಮತ್ತು ಪೂಜಿತಾ ಅನಿಸಿಕೆ ಅಭಿವ್ಯಕ್ತಪಡಿಸಿದರು .ಶಿಬಿರಾರ್ಥಿಗಳು ಎನ್ನೆಸ್ಸೆಸ್‌ ಆಶಯಗೀತೆ ಹಾಡಿದರು. ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಸುದರ್ಶನ್.ಬಿ ಪ್ರಸ್ತಾವನೆಗೈದರು. ಶಶಿಧರ್.ಎಸ್ ಸ್ವಾಗತಿಸಿದರು. ಶಿಬಿರಾಧಿಕಾರಿ ಗೀತಾ. ಯು ವಂದಿಸಿದರು. ಸೌಂದರ್ಯಲಕ್ಷ್ಮೀ ನಿರೂಪಿಸಿದರು.

LEAVE A REPLY

Please enter your comment!
Please enter your name here