ಉಡುಪಿ : ವಿಶ್ವಭಾರತಿ ಸೌಹಾರ್ದಕ್ರೆಡಿಟ್‌ಸಹಕಾರಿ ಸಂಘ ನಿಯಮಿತ, ಉಡುಪಿ ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ ೨೩-೦೯-೨೦೨೫ನೇ ಮಂಗಳವಾರವಳಕಾಡು ಪದ್ಮಾವತಿ ಸಭಾಸದನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದಅಧ್ಯಕ್ಷರಾದ ಹೆಚ್.ಮಹೇಶ್ ಶೆಣೈಅವರುಮಾತನಾಡಿ, ಸಹಕಾರಿಯು ಮಾರ್ಚ್ಅಂತ್ಯಕ್ಕೆಒಟ್ಟು೭.೬೬ಕೋಟಿರೂ. ದುಡಿಯುವ ಬಂಡವಾಳ, ೫.೮೬ಕೋಟಿರೂ. ಹೊರಬಾಕಿಸಾಲ, ೧೩.೦೪ ಕೋಟಿರೂ. ವ್ಯವಹಾರ ನಡೆಸಿ, ವರದಿ ವರ್ಷದಲ್ಲಿ೮೦.೮೫ ಲಕ್ಷರೂ. ಆದಾಯವನ್ನು ಗಳಿಸಿರುತ್ತದೆ ಹಾಗೂರೂ. ೬,೦೯,೫೭೬.೪೬ಲಾಭವನ್ನು ಗಳಿಸಿರುವುದಾಗಿ ತಿಳಿಸುತ್ತಾ,ಸಂಸ್ಥೆಯು ೯ ವರ್ಷಗಳನ್ನು ಪೂರೈಸಿ ೧೦ನೇ ವರ್ಷ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಸತತವಾಗಿ ೫ ವರ್ಷಗಳಿಂದ ಲಾಭವನ್ನು ಗಳಿಸುತ್ತಾ ಬಂದಿರುತ್ತದೆ. ಸಹಕಾರಿಯ ಬೆಳವಣಿಗೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರುವ ಸೊಸೈಟಿಯಗ್ರಾಹಕರು ಹಾಗೂ ಸದಸ್ಯರುಇದಕ್ಕೆಕಾರಣೀಕರ್ತರಾಗಿದ್ದು, ಅವರೆಲ್ಲರನ್ನೂ ಅಭಿನಂದಿಸಿದರು.
ನಿರ್ದೇಶಕರಾದರವಿನಾಥ ಪೈ ಅವರುಸಂಘದ ಸದಸ್ಯರಿಗೆ ಶೇ. ೮ ಡಿವಿಡೆಂಡ್ ಘೋಷಿಸಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸದಸ್ಯರಿಗೆವಿಸ್ತೃತವಾಗಿತಿಳಿಸಿದರು. ಹಾಗೂ ನಿರ್ದೇಶಕರಾದ ಪಿ. ಶ್ಯಾಮ್‌ಪ್ರಸಾದ್‌ಕುಡ್ವಅವರುಸಂಘದಬೆಳವಣಿಗೆಗೆ ಹಿರಿಯ ಸದಸ್ಯರ ಬೆಂಬಲ ಹಾಗೂ ಸಮಾಜದಎಲ್ಲಾ ವರ್ಗದವರ ಸಹಕಾರವನ್ನುಕೋರಿದರು.
ಉಪಾಧ್ಯಕ್ಷರಾದ ಎಂ. ಸದಾಶಿವ ರಾವ್‌ಅವರು ಕಳೆದ ಸಾಲಿನ ನಿರ್ಣಯ ಮತ್ತು ಅನುಷ್ಠಾನ ವರದಿಯನ್ನು ಓದಿ ದೃಢೀಕರಿಸಿದರು. ನಿರ್ದೇಶಕರಾದ ಹೆಚ್. ಸುರೇಶ್ ಶೆಣೈ, ಸೀಮಾ ಹೆಚ್. ಶೆಣೈ, ರಾಘು,ಗಜಾನನ ಹೆಗ್ಡೆ, ಅನಂತಕೃಷ್ಣ ಪ್ರಭು, ರೊನಾಲ್ಡ್ ಬ್ರೆಯಾನ್ ಬರ್ನಾರ್ಡ್, ಆನಂದ ಕೆ. ಪೂಜಾರಿ, ಸಿಬ್ಬಂದಿಗಳಾದ ನಿತ್ಯಾನಂದ ಪೈ, ಕೆ. ವಿಜಯ್ ನಾಯಕ್, ರೇವತಿ ಶೆಣೈ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಿರಣ ಉಳಿತ್ತಾಯ ವರದಿ ವಾಚಿಸಿದರು. ನಿರ್ದೇಶಕರಾದ ಮಾರುತಿಎನ್. ಪ್ರಭು ಅವರು ನಿರೂಪಣೆಗೈದು,ಉಮೇಶ್‌ಜೋಗಿಅವರು ವಂದಿಸಿದರು.

