ತಲಪಾಡಿ: ಭಜನೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆ

0
90

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ರಿ. ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಗಳೂರು ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 13-7-2025ರಂದು ನಡೆಯಲಿರುವ ವಲಯ ಮಟ್ಟದ ಭಜನೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆ ತಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಪರಿಷತ್ ಉಪಾದ್ಯಕ್ಷರಾದ ಪ್ರಕಾಶ್ ಕಿನ್ಯಾರವರು ಪ್ರಾರ್ಥನೆ ಹಾಡಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಜನೋತ್ಸವ ಕಾರ್ಯಕ್ರಮದ ಪೂರ್ವತಯಾರಿಯ ಬಗ್ಗೆ ಮಾಹಿತಿ ನೀಡಿದರು. ತಲಪಾಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಭಟ್ ತಲಪಾಡಿಯವರು ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಉಮೇಶ್ ಗಟ್ಟಿ, ನವೀನ್ ಬೆಲ್ಚಪಾಡ ಹಾಗೂ ನಾರಾಯಣ ಕುಂಪಲ ರವರು ಶುಭ ಹಾರೈಸಿದರು.
ವಲಯ ಸಮಿತಿಯ ಅಧ್ಯಕ್ಷರಾಗಿ ಸತೀಶ್ ದೀಪಂ ಉಪಾಧ್ಯಕ್ಷರಾಗಿ ಆಶಾ ಮಡ್ಯಾರು, ಕಾರ್ಯದರ್ಶಿಯಾಗಿ ಪ್ರಕಾಶ್ ಕಿನ್ಯ, ಜೊತೆ ಕಾರ್ಯದರ್ಶಿಯಾಗಿ ಶಶಿಕಲಾ, ಕೋಶಾಧಿಕಾರಿಯಾಗಿ ಪ್ರೀಯಾ ಎನ್ ಬಂಗೇರ ರವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದರು. ಶ್ರೀಮತಿ ಮೋಹಿನಿ ಸ್ವಾಗತಿಸಿದರು. ಶೀಮತಿ ಭವ್ಯ ಧನ್ಯವಾದವಿತ್ತರು. ವಲಯ ಮೇಲ್ವಿಚಾರಕರಾದ ಮೋಹನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here