ಕೂಟ ಮಹಾಜಗತಿನಿಂದ ಶಿಕ್ಷಕರ ದಿನ : ‘ಕೂಟ ಸಮಾಜದ ಶಿಕ್ಷಕ ರತ್ನ ‘ ಗೌರವ ಪ್ರಧಾನ ಸಮಾರಂಭ

0
8

ವ್ಯಕ್ತಿಯೊಬ್ಬನ ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಶಿಕ್ಷಕರು ಸಮಾಜದ ಕಣ್ಣುಗಳು ಎಂದು ಸಂಸ್ಕೃತ ವಿದ್ವಾಂಸರಾದ ವಾಗಿಶ್ವರಿ ಶಿವರಾಮ್ ನುಡಿದರು. ಅವರು ಇತ್ತೀಚೆಗೆ ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯು ಪಾಂಡೇಶ್ವರ ಶ್ರೀ ಗುರು ನರಸಿಂಹ ಸಭಾಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕೂಟ ಸಮಾಜದ ಶಿಕ್ಷಕ ರತ್ನ ಗೌರವ ಪುರಸ್ಕಾರವನ್ನು ನೀಡಿ ಮಾತನಾಡಿದರು ಅಕ್ಷರ ಜ್ಞಾನದ ಜೊತೆಗೆ ಲೋಕಜ್ಞಾನವನ್ನು ನೀಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು ಈ ನಿಟ್ಟಿನಲ್ಲಿ ಈ ಸಂಘಟನೆಯು ಸಮಾಜಮುಖಿಯಾಗಿ ಅತ್ಯಂತ ಒಳ್ಳೆ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನೃತ್ಯ ಗುರು ಶ್ರೀಧರ ಹೊಳ್ಳ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಭಾರತೀಯ ಸಂಸ್ಕೃತಿಯ ಸಿಂಚನವನ್ನು ನೀಡಿದಾಗ ಸೃಜನಶೀಲ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಇದರಿಂದ ಆ ಮಕ್ಕಳು ಸಮಾಜದ ಒಂದು ಆಸ್ತಿಯಾಗಬಲ್ಲರು ಈ ನಿಟ್ಟಿನಲ್ಲಿ ಹೆತ್ತವರು ಸಹ ಮನೆಯಲ್ಲಿ ಸಂಸ್ಕಾರದ ಶಿಕ್ಷಣವನ್ನು ನೀಡಬೇಕು ಎಂದರು.

ಸಮಾಜದ ಹಿರಿಯರಾದ ಖಂಡಿಗ ಸುಬ್ರಮಣ್ಯ ಭಟ್, ಪಿ ಶಾಂತರಾಮ ಕಾರಂತ, ಯಶೋಧ ಕೆ, ವಿಜಯಲಕ್ಷ್ಮಿ ಕಾರಂತ, ಸವಿತಾ ಐತಾಳ, ಇವರುಗಳನ್ನು ಕೂಟ ಸಮಾಜದ ಶಿಕ್ಷಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀಧರ ಹೊಳ್ಳ ಪ್ರಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು, ವಸಂತ ಲಕ್ಷ್ಮೀ ನಿರೂಪಿಸಿದರು. ಕಾರ್ಯದರ್ಶಿ ಜಿ.ಕೆ.ಮಯ್ಯ ವಂದಿಸಿದರು. ಕೋಶಾಧಿಕಾರಿ ಪದ್ಮನಾಭ ಮಯ್ಯ, ಗೌರಿ ಹೊಳ್ಳ, ಅನುಪಮ ಟಿ, ಪಂಕಜ ಐತಾಳ, ಶಶಿಪ್ರಭಾ ಐತಾಳ ಮೊದಲಾದವರು ಸನ್ಮಾನಿತರ ಪರಿಚಯ ಮಾಡಿದರು.ಸಂಘಟನೆಯ ಸದಸ್ಯರು ಪದಾಧಿಕಾರಿಗಳು, ಮಹಿಳಾ ವೇದಿಕೆಯ ಪ್ರಭಾ ಎಸ್ ರಾವ್, ಲಲಿತ ಉಪಾಧ್ಯಾಯ ಉಪಸ್ಥಿತರಿದ್ದರು.