ವೇಣೂರು: ದಶಲಕ್ಷಣ ಪರ್ವ ಆಚರಣೆ

0
8

ಉಜಿರೆ : ವೇಣೂರಿನಲ್ಲಿ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಯಾತ್ರಿನಿವಾಸದಲ್ಲಿ ಸೆ. 16 ರಿಂದ 25 ರ ವರೆಗೆ ಪ್ರತಿದಿನ ಸಂಜೆ ಗಂಟೆ 4.30 ರಿಂದ 6 ಗಂಟೆ ವರೆಗೆ ದಶಲಕ್ಷಣ ಪರ್ವ ಆಚರಣೆ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ತಿಳಿಸಿದ್ದಾರೆ.

ಸೆ. 16 ರಂದು ಬುಧವಾರ ಅಪರಾಹ್ನ ಗಂಟೆ 4.30 ಕ್ಕೆ ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದಗಳೊಂದಿಗೆ ಅಳದಂಗಡಿ ಅರಮನೆಯ ಮಧುರಾ ಪಿ. ಅಜಿಲ ಸಮಾರಂಭ ಉದ್ಘಾಟಿಸುವರು.

ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸುವರು.

ನಿವೃತ್ತ ಪ್ರಾಂಶುಪಾಲ ಡಾ. ಎಸ್.ಪಿ. ವಿದ್ಯಾಕುಮಾರ್ ಉತ್ತಮ ಕ್ಷಮಾ ಧರ್ಮದ ಬಗ್ಯೆ ಉಪನ್ಯಾಸ ನೀಡುವರು.

ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಶುಭಾಶಂಸನೆ ಮಾಡುವರು.

ಪ್ರತಿದಿನ ಅಪರಾಹ್ನ ಗಂಟೆ 4.30 ರಿಂದ ಬಸದಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕದ ಬಳಿಕ ಯಾತ್ರಿ ನಿವಾಸದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.