ಉಪ್ಪಿನಂಗಡಿಯಲ್ಲಿ ಭೀಕರ ರಸ್ತೆ ಅಪಘಾತ ; ರೋಡ್ ರೋಲರ್‌ ಅಡಿಗೆ ಸಿಲುಕಿ ಕಾರ್ಮಿಕ ಮೃತ..!

0
69

ಉಪ್ಪಿನಂಗಡಿಯಲ್ಲಿ ನಡೆದ ರಸ್ತೆ ಕಾಮಗಾರಿಯ ವೇಳೆ ದಾರುಣ ಘಟನೆ ಸಂಭವಿಸಿದೆ. ಮೇ 9ರಂದು ಗಾಂಧಿಪಾರ್ಕ್ ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಸರ್ವೀಸ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭ ಈ ದುರಂತ ನಡೆದಿದೆ.

ಮಾಹಿತಿಯ ಪ್ರಕಾರ, ಕೆಲಸದ ಸ್ಥಳದ ಬಳಿ ವ್ಯಕ್ತಿಯೋರ್ವ ರಸ್ತೆ ಬದಿ ಮಲಗಿದ್ದಾಗ, ಆ ಸ್ಥಳದಲ್ಲಿ ಚಲಿಸುತ್ತಿದ್ದ ರೋಡ್ ರೋಲರ್ ಅವನ ಮೇಲೆ ಹರಿದಿದೆ. ಪರಿಣಾಮವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಪಘಾತದಿಂದ ದೇಹ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ದೃಶ್ಯವು ಭೀಕರವಾಗಿತ್ತು.

ಮೃತ ವ್ಯಕ್ತಿ ಉತ್ತರ ಭಾರತ ಮೂಲದ ಕಾರ್ಮಿಕನೆಂದು ಶಂಕಿಸಲಾಗಿದೆ. ಘಟನೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ವಿವರಗಳು ಮತ್ತು ಗುರುತು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here