ಬೆಟ್ಟಂಪಾಡಿ : ಬೆಟ್ಟಂಪಾಡಿ ಸರಳಿಕಾನ ನಿವಾಸಿ ಸಶಿತ್ ಎಸ್ ಅವರು ಮೇ 13ರಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ಮತ್ತು ಟಾಟಾ ಏಸ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸೊಂಟದ ಪಕ್ಕಲುಗಳು, ಎಡಕೈ ಎಲುಬು, ಬಲಗೈಯ ಎರಡು ಬೆರಳುಗಳು ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತುರ್ತು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ.
ಚಿಕಿತ್ಸೆಗೆ ಅಂದಾಜು 6 ರಿಂದ 7 ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದ್ದು, ಕುಟುಂಬವು ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ದಾನಿಗಳ ಸಹಾಯಕ್ಕಾಗಿ ಮನವಿ ಮಾಡಲಾಗಿದೆ.
ಸಹಾಯಕ್ಕಾಗಿ ಬ್ಯಾಂಕ್ ವಿವರಗಳು:
ಹೆಸರು : Sowmya Shree S
ಖಾತೆ ಸಂಖ್ಯೆ : 64182038892
IFSC : SBIN0004270
ಸಹೃದಯಿಗಳು ಚಿಕಿತ್ಸೆಗೆ ನೆರವಾಗುವಂತೆ ಕುಟುಂಬಸ್ಥರು ವಿನಂತಿಸಿದ್ದಾರೆ.

