ವಿನಾಯಕ ಫ್ರೆಂಡ್ಸ್ ಕಾರ್ಕಳ ವತಿಯಿಂದ 6ನೇ ವರ್ಷದ ಕೆಸರ್ದ ಗೊಬ್ಬು ಕಾರ್ಯಕ್ರಮ ಯಶಸ್ವಿ

0
111

ಕಾರ್ಕಳ : ವಿನಾಯಕ ಫ್ರೆಂಡ್ಸ್ ಕಾರ್ಕಳ ವತಿಯಿಂದ 6ನೇ ವರ್ಷದ ಕೆಸರ್ದ ಗೊಬ್ಬು ಕಾರ್ಯಕ್ರಮವು ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಬಹಳ ಯಶಸ್ವಿಯಾಗಿ ಜರಗಿತು.

ಈ ಕಾರ್ಯಕ್ರಮಕ್ಕೆ ಅತೀ ಉತ್ಸಾಹದಿಂದ ಮಕ್ಕಳು, ಯುವಕರು ಹಾಗೂ ಮಹಿಳೆಯರು ಭಾಗವಿಸಿದಲ್ಲದೆ, ಮನೆಯಲ್ಲಿ ತಾವೇ ತಯಾರಿಸಿದ ತಿಂಡಿ ತಿನಸುಗಳನ್ನು ಮಹಿಳೆಯರು ಮಾಡಿ ಎಲ್ಲರಿಗೂ ಉಣ ಬಡಿಸಿದ್ದು ವಿಶೇಷವಾಗಿತ್ತು.

ಯಾವುದೇ ದುಂದುವೆಚ್ಚವಿಲ್ಲದೆ ನಡೆದ ಈ ಕ್ರೀಡಾಕೂಟದಲ್ಲಿ, ಹಲವಾರು ದಿನಗಳಿಂದ ನಾಪತ್ತೆಯಾಗಿದ್ದ ಮಳೆರಾಯ ಕೂಟದ ಸಮಯದಲ್ಲಿ ನಿರಂತರವಾಗಿ ಬಂದದ್ದು ಎಲ್ಲರಿಗೂ ಖುಷಿ ನೀಡಿದೆ.

ಈ ಕಾರ್ಯಕ್ರಮದಲ್ಲಿ ವಿನಾಯಕ ಫ್ರೆಂಡ್ಸ್ ಕಾರ್ಕಳ ಇದರ ಅಧ್ಯಕ್ಷರು, ಸದಸ್ಯರು ಹಾಗೂ ಪರಿಸರದ ಅನೇಕ ಗಣ್ಯರು ಆಗಮಿಸಿದ್ದರು.

ಪ್ರಚಾರ ಕಲೆ. ತುಳುನಾಡ ತುಡರ್ ಕೀರ್ತಿ ಕಾರ್ಕಳ

LEAVE A REPLY

Please enter your comment!
Please enter your name here