ದೇಶದ ಸರ್ವಾಂಗೀಣ, ಸುಸ್ಥಿರ ವಿಕಾಸಯುಕ್ತ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರವೇ ಕಾರಣ-ಎಸ್ ಆರ್ ಸತೀಶ್ಚಂದ್ರ

0
4

ಮೂಡುಬಿದಿರೆ ಕೊ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ 2026 ರ ಎರಡನೇ ದಿನದ ಕೃಷಿ ಮತ್ತು ಸಹಕಾರ ಸಂದರ್ಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಕ್ಯಾಂಪ್ಕೋ ಅಧ್ಯಕ್ಷ ಸಹಕಾರ ರತ್ನ ಎಸ್ ಆರ್ ಸತೀಶ್ ಚಂದ್ರ ವಾರಣಾಸಿ ಸುಬ್ರಾಯ ಭಟ್ಟರ ಕೊಡುಗೆಯನ್ನು ಅನಿಸುತ್ತಾ ಅಡಿಕೆ, ಕೊಕ್ಕೋ, ಕಾಫಿ ಬೆಳೆಗಾರರಿಗೆ ಪ್ರಾಥ ಸ್ಮರಣೀಯರು ಎಂದರು. ಅಚ್ಚುಕಟ್ಟು, ಶಿಸ್ತು ಬದ್ದ, ಸೇವಾ ಮನೋಭಾವದ, ಸದಾ ಸ್ಪಂದಿಸುವ, ಎಲ್ಲರನ್ನೂ ಒಂದೇ ರೀತಿ ಅಭಿವಂದಿಸುವ ನೌಕರರು, ಆಡಳಿತ ಮಂಡಳಿ, ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿಗಳಿಂದಾಗಿ ಎಂ ಸಿ ಎಸ್ ಸಹಕಾರ ಸಂಘದ ಕೀರ್ತಿ ದೇಶದೆಲ್ಲೆಡೆ ವ್ಯಾಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಯಾಂಪ್ಕೋ ಬ್ರಹ್ಮ ವಾರಣಾಸಿ ಸುಬ್ರಾಯ ಭಟ್ಟರ ಶತಮಾನದ ಸ್ಮರಣೆ ಮಾಡಿದ ವಿಶ್ರಾಂತ ಪ್ರಾಧ್ಯಾಪಕ, ಇತಿಹಾಸ ಸಂಶೋಧಕ ಡಾ ಗಣಪಯ್ಯ ಭಟ್ ಸುಬ್ರಾಯ ಭಟ್ಟರನ್ನು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರೊಂದಿಗೆ ಸಮೀಕರಿಸಿದರು. ಕೇವಲ ಮೆಟ್ರಿಕ್ ವಿದ್ಯಾಭ್ಯಾಸ ಕಲಿತ ಸುಬ್ರಾಯ ಭಟ್ಟರು ದೇಶವಿದೇಶಗಳಿಗೆ ಸಂಚರಿಸಿ ಅವಿರತ ಅಧ್ಯಯನವನ್ನು ಗೈದು ಅಡಿಕೆ, ಕೊಕ್ಕೋ ಬೆಳೆಗಾರರಿಗೆ ನೆಮ್ಮದಿಯ ಬದುಕನ್ನು ಕರುಣಿಸಿದರು ಎಂದು ಕೊಂಡಾಡಿದರು.

ವೇದಿಕೆಯಲ್ಲಿ ಉದ್ಯಮಿ ಶ್ರೀಪತಿ ಭಟ್ , ಪ್ರಾಂಶುಪಾಲ ಪಾರ್ಶ್ವನಾಥ ಖಅಜ್ರಿ, ಮಾರ್ಪಾಡಿ ಕೃಷಿಕ ಸಂಘದ ಸುರೇಂದ್ರ ಶೆಟ್ಟಿ ಹಾಜರಿದ್ದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಕನ್ನಡ ಹಿಂದಿ ವಿಷಯಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘದ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳಲ್ಲಿ ಸೊಸೈಟಿಯ ನೂತನ ಯೋಜನೆ ಪರಿಚಯಿಸಿದರು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಜ್ಞಾನೇಶ್ವರ ಪೈ ವಂದಿಸಿದರು. ತರುವಾಯ ಮೋಹನ ಹೊಸ್ಮಾರು ನಿರ್ದೇಶನದ ಸಾಂಸ್ಕೃತಿಕ ವೈಭವ ನಡೆಯಿತು.

ವರದಿ ರಾಯಿ ರಾಜ ಕುಮಾರ್


.


.