ಕಾಸರಗೋಡು :ಕನ್ನಡ ಭವನದ ಕನ್ನಡಪರ ಚಟುವಟಿಕೆಗಳು ಅನುಕರಣೀಯ ಹಾಗೂ ಶ್ಲಾಘನೀಯ. ಹಿರಿಯರನ್ನು ಗೌರವಿಸಿ, ಪ್ರತಿಭವಂತರನ್ನು ಪುರಸ್ಕರಿಸಿ, ಯುವ ಪ್ರತಿಭೆಗಳನ್ನು ಹುಡುಕಿ ತೆಗೆದು “ಭರವಸೆಯ ಬೆಳಕು “ಎಂಬ ಅರ್ಹ ನಾಮದ ಪ್ರಶಸ್ತಿ ನೀಡಿ, ವಿವಿಧ ಸಮಾನ ಮನಸ್ಕ ಸಂಘಟನೆಗಳನ್ನು, ಸಂಘಟಕರನ್ನು ಒಂದೇ ವೇದಿಕೆಯಡಿ ತೊಡಗಿಸಿ ಕೊಳ್ಳಲು ಅವಕಾಶ ಮಾಡಿಕೊಡುವ ವಾಮನ್ ರಾವ್ ಬೇಕಲರ ಮುಂದಿನ ಎಲ್ಲ ಕನ್ನಡಪರ ಚಟುವಟಿಕೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ. ಜತೆಗೂಡಿ ಪರಸ್ಪರ ಕೈ ಜೋಡಿಸಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವ, ಬೆಳೆಸುವ ಕೆಲಸ ಮಾಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್, ನಿಕಟಪೂರ್ವ ಅಧ್ಯಕ್ಷರು, ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು. ಇವರು ಭಾನುವಾರ ಮಂಗಳೂರು ತಾಲೂಕು ಮಹಿಳಾ ಒಕ್ಕೂಟ ಸಭಾ ಭವನದಲ್ಲಿ ನಡೆದ ಡಾ. ವಾಮನ್ ರಾವ್ ಸಾರತ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ಕನ್ನಡ ಧ್ವಜ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರಿಮತಿ ರೇಖಾ ಸುದೇಶ್ ರಾವ್ ಇವರೀಗೆ ನೀಡಿ ಉದ್ಘಾಟಿಸಿದರು.
ಕನ್ನಡ ಭವನ ದ. ಕ. ಜಿಲ್ಲಾ ಗೌರವ ಅಧ್ಯಕ್ಷರಾದ ಡಾ. ರವೀಂದ್ರ ಜೆಪ್ಪು ದೀಪ ಬೆಳಗಿಸುವ ಮೂಲಕ ಸಮಾರಂಭ ವನ್ನು ಚಾಲನೆ ಗೊಳಿಸಿದರು.ಮುಖ್ಯ ಅತಿಥಿಯಾಗಿ ಡಾ. ಉದಯಕುಮಾರ್,ಶುಭ ಹಾರೈಸಿದರು.ವಿಧಾನಸಭಾ ಮಾಜಿ ಸಚೇತಕರಾದ ಕ್ಯಾ. ಗಣೇಶ್ ಕಾರ್ಣಿಕ್ ಕನ್ನಡ ಭವನದ ಕಾರ್ಯ ಚಟುವಟಿಕೆ ಗಳ ಬಗ್ಗೆ ಅಭಿಮಾನ ದಿಂದ ಮಾತನಾಡಿ “ಕನ್ನಡ ಕಟ್ಟುವುದರೊಂದಿಗೆ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಯುವಜನರು ದ್ರಿಡ ಸಂಕಲ್ಪ ಮಾಡಬೇಕು ಎಂದು “ಭರವಸೆಯ ಬೆಳಕು “ಪ್ರಶಸ್ತಿ ಬಾಜಾನರಾದ ಜಿಲ್ಲೆಯ ಪ್ರತಿಭಾವಂತರಲ್ಲಿ ವಿನಂತಿಸಿದರು.
ಅತಿಥಿಗಳಾಗಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಚು. ಸಾ. ಪ. ಅಧ್ಯಕ್ಷರಾದ ಡಾ. ಕೊಳಚಪ್ಪೆ ಗೋವಿಂದ ಭಟ್,, ಓಜಸ್ ಸಂಸ್ಥೆ ಅಧ್ಯಕ್ಷರಾದ ಮಂಗಳ ಏನ್. ಕೆ. ಕರ್ನಾಟಕ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷರಾದ ರಾಣಿ ಪುಷ್ಪಲತಾ ದೇವಿ, ರಾಷ್ಟ್ರೀಯ ಸಾ. ಸಾ. ಅಭಿವೃದ್ಧಿ ಸಂಸ್ಥೆ ಯ ಅಧ್ಯಕ್ಷ ಗಂಗಾಧರ್ ಗಾಂಧಿ, ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಅಧ್ಯಕ್ಷೆ ಡಾ. ಮಾಲತಿ ಶೆಟ್ಟಿ ಮಾನೂರು, ಪ್ರಕಾಶ್ ಚಂದ್ರ ಉಳ್ಳಾಲ, ಶೋಭಾ ಲೋಕೇಶ್, ಚಂದ್ರಕಾಂತ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ. ಶಿವಾನಂದ ಬೇಕಲ್, ಕ್ಯಾ. ಗಣೇಶ್ ಕಾರ್ಣಿಕ್ ರೀಗೆ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2025.”ನೀಡಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಮಾಜ ಸೇವಾ ನಿರತರಾದ, ನಾಡೋಜ ಡಾ. ಕೃಷ್ಣಪ್ರಸಾದ್ ನೇತ್ರಾಲಯ, ಶ್ರೀ ಜೆ. ಕೆ. ರಾವ್ ಮಂಗಳೂರು ಶ್ರೀ ಯೋಗೀಶ್ ಕುಮಾರ್ ಜೆಪ್ಪು, ಡಾ. ಉದಯಕುಮಾರ್, ಡಾ. ಮಂಜುಳಾ ಅನಿಲ್ ರಾವ್, ಡಾ. ಕೆ. ವಿ. ದೇವಪ್ಪ. ಇವರೀಗೆ ಕನ್ನಡ ಭವನದ ಪ್ರತಿಷ್ಠಿತ “ಸಮಾಜ ಸೇವಾ ರತ್ನ ಪ್ರಶಸ್ತಿ 2025.ನೀಡಲಾಯಿತು.
ರತ್ನಾ ಟೀಚರ್, ಜೋಗಟ್ಟೆ, ಶಾರದಾ ಮೊಳೆಯಾರ್, ಜೋಸ್ನಾ ನುಳ್ಳಿಪ್ಪಾಡಿ, ಮಂಗಳೂರು, ಜನಾರ್ದನ್ ಎಚ್ ಎಸ್,ಮಂಜುನಾಥ್ ಕೆ ಬೈಲೂರ್, ರಾಜನ್ ಮುನಿಯೂರ್, ಪ್ರವೀಣ್ ಕುಲಕರ್ಣಿ ಬಿದಿಗೆಚಂದ್ರ, ಶರಣ್ ಬೇಕಲ್ ಇವರೀಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಪ್ರಶಸ್ತಿ “ನೀಡಿ ಪುರಸ್ಕಾರಿಸಲಾಯಿತು.
ಎಶಿಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ,”ನ್ಯೂ ಎಶಿಯನ್ ಚಾಂಪಿಯನ್ ಶಿಪ್ ಪಡೆದ ಕುಮಾರಿ ನಾಗಶ್ರೀ ಗಣೇಶ್ ಉಪ್ಪಿನಕುದ್ರು ಇವರೀಗೆ ವಿಶೇಷ ಸನ್ಮಾನದೊಂದಿಗೆ ದಿ. ಲೈಟ್ ಒಫ್ ಹೋಪ್ಸ್ -ಅಚೀವ್ಮೆಂಟ್ ಅವಾರ್ಡ್ “ನೀಡುವುದರೊಂದಿಗೆ, ವಿವಿಧ ವಿಭಾಗಗಳಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಮೆರೆದ, ಕೃತಿ ಬೇಕಲ್, ಜ್ಞಾನೇಶ್ ಬೇಕಲ್, ಐಶ್ವರ್ಯ ಆರ್, ಇಂಚರ, ಕೃತಿ, ಮನೀಶ್ ರಾವ್ ಆರ್. ಬಿ. ಹವೀಶ್ ಆರ್, ಗಣೇಶ್ ರಾಜ್ ಕೆ. ಎಂ. ಡ್ಯಾಫ್ನ ಕೆ. ವಿ., ದ್ಯಾನ್ ಮದ್ದೋಡಿ, ದೀಕ್ಷಿತಾ ವಿ., ಭುವಿ, ನಿತ್ಯ, ಶಿವಾನಿ ದಿನೇಶ್ ರಾವ್, ಕು. ಮಾನ್ಯ, ಸಾಗರಿ ಎಸ್, ನಿನಾದ, ದೀಕ್ಷಾ, ಡಿ. ರಾವ್, ಸುಪ್ರೀತಾ ರಾವ್ ಬಿ., ಸಾತ್ವಿಕ್ ಕೆ. ಸಾನ್ವಿ ಗುರುಪುರ, ಸಾಕ್ಷಿ, ಸಾದ್ವಿನಿ, ವೈಷ್ಣವಿ ವಿ. ಬೇಕಲ್, ವೈಶಾಕ್ ಕುಮಾರ್, ತನುಷ್ ಕೆ., ಸ್ವಸ್ತಿಕ್ ಆರ್, ಯಕ್ಷತ್ ಶೆಟ್ಟಿ, ಚಿರಸ್ವಿ ಕೆ. ಜಿ., ಶ್ರೇಯ ಕೃಷ್ಣ, ಇವರುಗಳಿಗೆ ಕನ್ನಡ ಭವನದ ಯುವ ಪ್ರತಿಭಾ ಪ್ರಶಸ್ತಿಯಾದ “ಭರವಸೆಯ ಬೆಳಕು -light of hopes Achievement award 2025.ನೀಡಿ ಪುರಸ್ಕಾರಿಸಲಾಯಿತು.
ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಪ್ರದೀಪ್ ಬೇಕಲ್ ಪ್ರಸ್ತಾವಿಕ,ವೈಶಾಕ್ ಕುಮಾರ್ ಕಾರ್ಯಕ್ರಮ ನಿರೂಪಣೆ, ಉಮೇಶ್ ರಾವ್ ಕುಂಬ್ಳೆ ವಂದಿಸಿದರು. ಕಾರ್ಯಕ್ರಮ ದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ನೆತ್ರಿತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಯ ಕಲಾವಿದರ ನ್ರಿತ್ಯ, ಗಾನ ವೈಭವ ಕಾರ್ಯಕ್ರಮ ನಡೆಯಿತು.
ಕನ್ನಡ ಭವನದ ಕನ್ನಡಪರ ವಿಸ್ತಾರ ಚಟುವಟಿಕೆ ಅನುಕರಣೀಯ ಹಾಗೂ ಶ್ಲಾಘನೀಯ -ಪ್ರದೀಪ್ ಕುಮಾರ್ ಕಲ್ಕೂರ.
RELATED ARTICLES